ಆನೇಕಲ್: ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಲಾ ಕ್ಲಾಸಿಕ್ ಹೋಟೆಲ್ ವತಿಯಿಂದ ತಯಾರಿಸಿದ್ದ 218 ಅಡಿ ಉದ್ದದ ಐಸ್‌ಕ್ರೀಂ ಡೆಸರ್ಟ್ ತಯಾರಿಸಲಾಗಿದ್ದು, ಇದೊಂದು ವಿಶ್ವದಾಖಲೆಯಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಐವತ್ತು ಮಂದಿ ನುರಿತ ಐಸ್‌ಕ್ರೀಂ ತಯಾರಕರು 22 ನಿಮಿಷದಲ್ಲಿ 218 ಅಡಿ ಉದ್ದದ ಐಸ್‌ಕ್ರೀಂ ಡೆಸರ್ಟ್ ತಯಾರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಈ ಹಿಂದೆ ಅಮೆರಿಕಾದ ಲೇಕ್ ಕಂಟ್ರಿ ಕ್ಲಬ್, ವರ್ಜೀನಿಯಾ ಇವರು 200 ಅಡಿ ಉದ್ದದ ಐಸ್‌ಕ್ರೀಂ ಡೆಸರ್ಟ್ ತಯಾರಿಸಿ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮುರಿಯಲಾಗಿದೆ.

ಐಸ್‌ಕ್ರೀಂ ಡೆಸರ್ಟ್ ತಯಾರಿಕೆಗೆ 800 ಲೀ. ಐಸ್‌ಕ್ರೀಂ, 60 ಕಿಲೋ ಹಾಟ್ ಪುಡ್ಜ್, 600 ಕಿಲೋ ಹಣ್ಣುಗಳು, 60 ಕಿಲೋ ಕ್ರೀಂ, 60 ಕಿಲೋ ಚೆರಿ, 35 ಕಿಲೋ ಕ್ಯಾರ‌್ಮೆಲ್, 20 ಲೀ. ಮ್ಯಾಂಗೋ ಜ್ಯೂಸ್, 100 ಕಿಲೋ ಟೀ ಕೇಕ್ ಹಾಗೂ 1000 ಪಾಕೆಟ್ ಬಿಸ್ಕತ್ತು ಬಳಸಲಾಗಿದೆ ಎಂದು ಹೋಟೆಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ರಾಜಗೋಪಾಲ ಅಯ್ಯರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಮಾತನಾಡಿ ವಿಶ್ವದಾಖಲೆ ನಿರ್ಮಿಸಲು ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ವಿಶ್ವ ಆಹಾರ ದಿನಾಚರಣೆಯ ಸಂದರ್ಭದಲ್ಲಿ ಇಂತಹ ದಾಖಲೆ ನಿರ್ಮಿಸಿರುವುದು ಸಂತಸ ತಂದಿದೆ ಎಂದರು.

ಹಾಪ್‌ಕಾಮ್ಸ ನಿರ್ದೇಶಕ ಎಂ.ಬಾಬು, ಹೋಟೆಲ್‌ನ ನಿರ್ದೇಶಕ ಕೇಶವರೆಡ್ಡಿ ಮತ್ತಿತರರು ಹಾಜರಿದ್ದರು.
ಹೋಟೆಲ್ ಮುಂಭಾಗದ ರಸ್ತೆಯಲ್ಲಿ ತಯಾರಿಸಿದ್ದ ಉದ್ದನೆಯ ಐಸ್‌ಕ್ರೀಂ ಡೆಸರ್ಟ್ ವೀಕ್ಷಿಸಲು ನೂರಾರು ಮಂದಿ ಆಗಮಿಸಿದ್ದರು.

ಪುಟಾಣಿಗಳು ಕುತೂಹಲದಿಂದ ಐಸ್‌ಕ್ರೀಂ ನೋಡುತ್ತಿದ್ದ ದೃಶ್ಯ ಕಂಡುಬಂದಿತು. ಅಳತೆ ಮತ್ತು ತೂಕದ ಇಲಾಖೆಯವರು ಮಾಪನ ಮಾಡಿ 218 ಅಡಿಗಳನ್ನು ದೃಢಪಡಿಸುತ್ತಿದ್ದಂತೆಯೇ ನೆರೆದಿದ್ದ ಸಿಬ್ಬಂದಿ ಹಾಗೂ ವೀಕ್ಷಕರು ಸಂತಸದಿಂದ ಕುಣಿದಾಡಿ ದಾಖಲೆ ಸಂಭ್ರಮವನ್ನು ಅನುಭವಿಸಿದರು.

ದಾಖಲೆ ಘೋಷಣೆ ನಂತರ ನೆರೆದಿದ್ದ ಜನರಿಗೆ ಐಸ್‌ಕ್ರೀಂ ಉಚಿತವಾಗಿ ವಿತರಿಸಲಾಯಿತು. ನಂತರ ಚಂದಾಪುರದ ಅನಾಥಾಶ್ರಮದ ಮಕ್ಕಳಿಗೆ ಐಸ್‌ಕ್ರೀಂ ನೀಡಿ ವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.