ಮಂಗಳವಾರ, ಅಕ್ಟೋಬರ್ 27, 2020
22 °C
ಮೂರು ಸಾವಿರ ದಾಟಿದ ಪ್ರಕರಣ

ಮಾಸ್ಕ್‌ ಧರಿಸದವರ ವಿರುದ್ಧ ಪೊಲೀಸರ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯಲ್ಲಿ ಮಾಸ್ಕ್‌ ಹಾಕಿಕೊಳ್ಳದೇ, ಕೋವಿಡ್‌ ಸುರಕ್ಷಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಣ್ಣಿಟ್ಟಿದ್ದು, ಬರೋಬ್ಬರಿ 4 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಗಳ ವ್ಯಾಪ್ತಿಯಲ್ಲಿ 22 ಠಾಣೆಗಳು ಇದ್ದು, ಈ ತಿಂಗಳ ಮೊದಲ ವಾರದ ಅಂತ್ಯಕ್ಕೆ 3212 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ ಪ್ರಕರಣಗಳಿಗೆ ಲೆಕ್ಕವೇ ಇಲ್ಲ ಎನ್ನುತ್ತಾರೆ ಪೊಲೀಸ್‌ ಸಿಬ್ಬಂದಿ.

ಎಲ್ಲಿ ಎಷ್ಟೆಷ್ಟು?: ರಾಮನಗರ ಟೌನ್‌ ಠಾಣೆಯಲ್ಲಿ 198, ಐಜೂರು ಠಾಣೆ ವ್ಯಾಪ್ತಿಯಲ್ಲಿ 114, ಗ್ರಾಮೀಣ ಠಾಣೆಯಲ್ಲಿ 142, ಬಿಡದಿಯಲ್ಲಿ 238 ಸೇರಿದಂತೆ ರಾಮನಗರ ತಾಲ್ಲೂಕಿನಲ್ಲಿ ಒಟ್ಟು 692 ಪ್ರಕರಣಗಳು ದಾಖಲಾಗಿವೆ. ಕನಕಪುರ ತಾಲ್ಲೂಕಿನಲ್ಲಿ 522 ಪ್ರಕರಣ, ಚನ್ನಪಟ್ಟಣ ತಾಲೂಕಿನಲ್ಲಿ 417, ಮಾಗಡಿ ತಾಲೂಕಿನಲ್ಲಿ 253 ಪ್ರಕರಣಗಳು ದಾಖಲಾಗಿವೆ. ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಒಳ ಪಡುವ ಬೆಂಗಳೂರು ನಗರ ಪ್ರದೇಶಗಳಾದ ಕಗ್ಗಲಿಪುರ ಠಾಣಾ ವ್ಯಾಪ್ತಿಯಲ್ಲಿ 466, ಕುಂಬಳಗೂಡು ಠಾಣೆ ವ್ಯಾಪ್ತಿಯಲ್ಲಿ 252, ತಾವರೆಕೆರೆ ಠಾಣಾ ವ್ಯಾಪ್ತಿಯಲ್ಲಿ 117 ಪ್ರಕರಣಗಳು ದಾಖಲಿಸಿ ದಂಡ ವಿಧಿಸಲಾಗಿದೆ.

ರಾಮನಗರ ಸಂಚಾರ ಪೊಲೀಸರು 178, ಚನ್ನಪಟ್ಟಣ ಸಂಚಾರ ಪೊಲೀಸರು 215 ಮತ್ತು ಕನಕಪುರ ಸಂಚಾರ ಪೊಲೀಸರು 99 ಪ್ರಕರಣಗಳನ್ನು ದಾಖಲಿಸಿದ್ದಾರೆ. ಮಾಸ್ಕ್ ಧರಿಸದ ಪ್ರತಿಯೊಬ್ಬರಿಗೂ ಸರ್ಕಾರದ ನಿಯಮದಂತೆ ನಗರ ಪ್ರದೇಶದಲ್ಲಿ ₨250 ಹಾಗೂ ಗ್ರಾಮೀಣ ಪ್ರದೇಶದಲ್ಲಿ ₨100 ದಂಡ ವಿಧಿಸಲಾಗುತ್ತಿದೆ.

ಸ್ಥಳೀಯ ಸಂಸ್ಥೆಗಳಿಗೂ ಅಧಿಕಾರ: ಪೊಲೀಸರು ಮಾತ್ರವಲ್ಲದೆ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸಹ ಕೋವಿಡ್ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ಹಾಕುತ್ತಿದ್ದಾರೆ. ರಾಮನಗರ, ಚನ್ನಪಟ್ಟಣ, ಕನಕಪುರದಲ್ಲಿನ ನಗರಸಭೆಗಳು ಹಾಗೂ ಮಾಗಡಿ ಮತ್ತು ಬಿಡದಿ ಪುರಸಭೆಗಳ ವ್ಯಾಪ್ತಿಯಲ್ಲೂ ಮಾಸ್ಕ್‌ ಧರಿಸದವರಿಗೆ ದಂಡ ಬೀಳುತ್ತಿದೆ. ಇವುಗಳಿಂದ 1 ಲಕ್ಷಕ್ಕೂ ಹೆಚ್ಚು ಮೊತ್ತದ ದಂಡ ಸಂಗ್ರಹವಾಗಿದೆ.

6497 ಮಂದಿಗೆ ಸೋಂಕು

ರಾಮನಗರ: ಜಿಲ್ಲೆಯಲ್ಲಿ ಸೋಮವಾರ 35 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ.

ಚನ್ನಪಟ್ಟಣ 9, ಕನಕಪುರ 11, ಮಾಗಡಿ 6 ಮತ್ತು ರಾಮನಗರ 9 ಪ್ರಕರಣಗಳು ಇದರಲ್ಲಿ ಸೇರಿವೆ. ಇದುವರೆಗೆ ಜಿಲ್ಲೆಯಲ್ಲಿ 6497 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 1554, ಕನಕಪುರ 1427, ಮಾಗಡಿ 1035 ಮತ್ತು ರಾಮನಗರ 2481 ಪ್ರಕರಣಗಳು ಸೇರಿವೆ. ಕನಕಪುರ ತಾಲ್ಲೂಕಿನಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಚನ್ನಪಟ್ಟಣ ತಾಲ್ಲೂಕಿನಲ್ಲಿ 14, ಕನಕಪುರ ತಾಲ್ಲೂಕಿನಲ್ಲಿ 14, ಮಾಗಡಿ ತಾಲ್ಲೂಕಿನಲ್ಲಿ 16 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 16 ಜನ ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 60 ಮಂದಿ ನಿಧನರಾಗಿದ್ದಾರೆ.

ಗುಣಮುಖ: ಚನ್ನಪಟ್ಟಣ ತಾಲ್ಲೂಕಿನಲ್ಲಿ 17, ಕನಕಪುರ ತಾಲ್ಲೂಕಿನಲ್ಲಿ 19, ಮಾಗಡಿ ತಾಲ್ಲೂಕಿನಲ್ಲಿ 11 ಹಾಗೂ ರಾಮನಗರ ತಾಲ್ಲೂಕಿನಲ್ಲಿ 29 ಜನ ಸೇರಿ ಒಟ್ಟಾರೆ 76 ಜನರು ಸೋಮವಾರ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 5691 ಜನರು ಗುಣಮುಖರಾಗಿದ್ದಾರೆ. ಇನ್ನೂ 746 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು