ಶನಿವಾರ, ಸೆಪ್ಟೆಂಬರ್ 25, 2021
22 °C

ಕಾಡುಹಂದಿ ಬೇಟೆ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬಿಡದಿ ಹೋಬಳಿಯ ಹುಲ್ತಾರ್‌ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬುಧವಾರ ಬಂಧಿಸಿದ್ದಾರೆ.

ಕಾಕರಾಮನಹಳ್ಳಿ ನಿವಾಸಿ ವೀರಭದ್ರಯ್ಯ (40), ಗಾಣಗಲ್‌ ನಿವಾಸಿ ಸಿದ್ದರಾಜು (61), ಕೆಂಪನಹಳ್ಳಿ ನಿವಾಸಿ ರಾಮಚಂದ್ರಯ್ಯ (26), ಪಾದರಹಳ್ಳಿಯ ಮೋಹನ್‌ಕುಮಾರ್ (33), ಮುದ್ದಾಪುರ ಕರೇನಹಳ್ಳಿಯ ವೆಂಕಟರಮಣಪ್ಪ (61) ಬಂಧಿತರು.

ಇವರು ಕಾಡಿನಲ್ಲಿ ಸಿಡಿಮದ್ದಿನ ಉಂಡೆ ಇಟ್ಟು ಹಂದಿಯನ್ನು ಬೇಟೆಯಾಡಿದ್ದರು. ಬಳಿಕ ಅದರ ಮಾಂಸವನ್ನು ಹಂಚಿಕೊಳ್ಳುವ ಸಂದರ್ಭ ದಾಳಿ ಮಾಡಿ ಬಂಧಿಸಲಾಯಿತು ಎಂದು ವಲಯ ಅರಣ್ಯಾಧಿಕಾರಿ ದಾಳೇಶ್‌ ತಿಳಿಸಿದರು. ಬಿಡದಿ ಉಪ ವಲಯ ಅರಣ್ಯಾಧಿಕಾರಿ ನೇತೃತ್ವದ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು