ಭಾನುವಾರ, ಮೇ 9, 2021
25 °C

ರಾಮನಗರ: 65 ಮಂದಿಗೆ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಗುರುವಾರ 65 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ರಾಮನಗರ ತಾಲ್ಲೂಕಿನ 20, ಚನ್ನಪಟ್ಟಣ 14, ಕನಕಪುರ 16 ಹಾಗೂ ಮಾಗಡಿ ತಾಲ್ಲೂಕಿನ 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 368ಕ್ಕೇರಿದೆ. ಮಾಗಡಿ ತಾಲ್ಲೂಕಿನಲ್ಲಿ ಸೋಂಕಿನಿಂದ ಒಬ್ಬರು ಮರಣ ಹೊಂದಿದ್ದು, ಮೃತರ ಸಂಖ್ಯೆ 80ಕ್ಕೇರಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 8,306 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 7,858 ಜನರು ಗುಣಮುಖರಾಗಿದ್ದಾರೆ.

ಗುಣಮುಖ: ರಾಮನಗರ ತಾಲ್ಲೂಕಿನ 7, ಚನ್ನಪಟ್ಟಣ ತಾಲ್ಲೂಕಿನ 7, ಮಾಗಡಿ ತಾಲ್ಲೂಕಿನ 11 ಮತ್ತು ಕನಕಪುರದ 5 ಸೇರಿದಂತೆ ಒಟ್ಟು 30 ಮಂದಿ ಗುರುವಾರ ಗುಣಮುಖರಾಗಿ ಆಸ್ಪತ್ರೆಗಳಿಂದ ಹೊರ ಬಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.