ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಮ್ಮನಹಳ್ಳಿ: ರಾಗಿ ಕ್ಷೇತ್ರೋತ್ಸವ

Published 25 ನವೆಂಬರ್ 2023, 8:53 IST
Last Updated 25 ನವೆಂಬರ್ 2023, 8:53 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿ ಪೆಮ್ಮನಹಳ್ಳಿಯಲ್ಲಿ ಗುರುವಾರ ಹೊಸ ರಾಗಿ ತಳಿ ಎಂ.ಎಲ್. 322ರ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಡಾ. ದಿನೇಶ, ಎಂ.ಎಸ್. ಮಾತನಾಡಿ, ತಾಲ್ಲೂಕಿನಲ್ಲಿ ಬಹುತೇಕ ರೈತರು ದೀರ್ಘಾವಧಿ ತಳಿಗಳಾದ ಎಂ.ಆರ್.-1 ಮತ್ತು ಎಂ.ಆರ್. 6 ಬೆಳೆಯುತ್ತಿದ್ದಾರೆ. ಜುಲೈ ತಿಂಗಳಿನಲ್ಲಿ ಮಳೆ ಸರಿಯಾದ ಪ್ರಮಾಣದಲ್ಲಿ ಬೀಳದೆ ಬಿತ್ತನೆ ತಡವಾದಾಗ ಈ ತಳಿಗಳ ಬಿತ್ತನೆ ಕಷ್ಟವಾಗಿತ್ತು. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರವು ಸುಧಾರಿತ ಮಧ್ಯಮಾವಧಿ ತಳಿ ಎಂ.ಎಲ್.-322 ಅನ್ನು ಜಿಲ್ಲೆಯ ರೈತರಿಗೆ ಮುಂಚೂಣಿ ಪ್ರಾತ್ಯಕ್ಷಿಕೆಯ ಮೂಲಕ ಪರಿಚಯಿಸಿದೆ. ಈ ವರ್ಷ ಮಳೆ ಕಡಿಮೆಯಾದರೂ ಸಹ ಎರಡು ಸಂರಕ್ಷಣಾ ನೀರಾವರಿ ನೀಡಿ ಪೆಮ್ಮನಹಳ್ಳಿ ರೈತ ಗಂಗಹನುಮಯ್ಯ ಉತ್ತಮವಾಗಿ ಬೆಳೆದಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ ಎಂದರು.

ಪ್ರಾತ್ಯಕ್ಷಿಕೆಯಲ್ಲಿ 15 ರೈತರಿಗೆ ತಡವಾದ ಮುಂಗಾರಿಗೆ ಸೂಕ್ತವಾಗುವಂತೆ ಈ ತಳಿ ಪರಿಚಯಿಸಿದ್ದು, ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಬಾರಿಯ ಕೃಷಿಮೇಳದಲ್ಲಿ ಹೊಸ ತಳಿಯನ್ನು ಲೋಕಾರ್ಪಣೆ ಮಾಡಿದ್ದು, ರೈತರು  ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಮುಖ್ಯಸ್ಥೆ ಡಾ. ಲತಾ ಆರ್. ಕುಲಕರ್ಣಿ ಅವರು  ರಾಗಿಯಲ್ಲಿರುವ ಪೋಷಕಾಂಶಗಳು ಮತ್ತು ರಾಗಿ ಸೇವನೆಯ ಮಹತ್ವದ ಬಗ್ಗೆ ವಿವರಿಸಿದರು. 

ಪೆಮ್ಮನಹಳ್ಳಿ, ಹಕ್ಕಿನಾಳು, ನಾಗನಹಳ್ಳಿಯ 40ಕ್ಕೂ ಹೆಚ್ಚಿನ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT