ಗುರುವಾರ , ಜನವರಿ 23, 2020
28 °C
ಮಾಗಡಿ ಸಮೀಪ ಘಟನೆ

ರಾಮನಗರ | ಕಂಬಕ್ಕೆ ಕಾರ್ ಡಿಕ್ಕಿ: ಮಂಗಳೂರಿನ ಮೂವರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮಾಗಡಿ ತಾಲ್ಲೂಕಿನ ಗುಡೆಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಬೆಂಗಳೂರು- ಮಂಗಳೂರು ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ಸೇತುವೆ ಕಂಬಕ್ಕೆ ಕಾರ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟರು.

ಮಂಗಳೂರಿನವರಾದ ಕಿಶನ್ (35), ಮೂನಪ್ಪ (40), ಅಕ್ಷಯ್ (40) ಮೃತರು. ರಾಘವೇಂದ್ರ, ಚಂದ್ರಶೇಖರ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಒಟ್ಟು ಆರು ಮಂದಿ ಇದ್ದರು. ಶಬರಿಮಲೆ, ತಿರುಪತಿ ಪ್ರವಾಸ ಮುಗಿಸಿ ಮಂಗಳೂರಿಗೆ ವಾಪಸ್ ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿತು.

ಪ್ರತಿಕ್ರಿಯಿಸಿ (+)