ಕನಕಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ರೂರಲ್ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಹೆಚ್ಐವಿ/ ಏಡ್ಸ್ ರೋಗದ ಕುರಿತು ಗುರುವಾರ ನಗರದಲ್ಲಿ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.

ಈ ವೇಳೆ ರೂರಲ್ ಪದವಿ ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಹೆಚ್.ಐ.ವಿ ರೋಗದ ಕುರಿತು ತಪ್ಪು ತಿಳುವಳಿಕೆ ಇರಬಾರದು, ಈ ಮಾರಕ ರೋಗದ ಕುರಿತು ಸೂಕ್ತ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ನಗರದ ಚನ್ನಬಸಪ್ಪ ಸರ್ಕಲ್ ಹಾಗೂ ಕೆ.ಎನ್.ಎಸ್ ವೃತ್ತದಲ್ಲಿ ಜಾಗೃತಿ ಅಭಿಯಾನದ ಜಾಥಾ ನಡೆಸಿ ನಗರದ ಜನರ ಗಮನ ಸೆಳೆದರು.

ಜಿಲ್ಲಾ ಆರೋಗ್ಯ ಕೇಂದ್ರದ ಅಧಿಕಾರಿ ಪ್ರಭಾವತಿ, ದೇವರಾಜು, ಚಂದ್ರಶೇಖರ್, ಎ.ಪಿ. ಪ್ರಕಾಶ್, ಅಪ್ಪಾಜಿ ಗೌಡ, ಕೆಂಪೇಗೌಡ, ವಿಜಯೇಂದ್ರ, ಹನುಮಂತರಾಜು ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.