ಮಂಗಳವಾರ, ಆಗಸ್ಟ್ 3, 2021
28 °C
ಸಾಮಾಜಿಕ ಲೆಕ್ಕಾ ಪರಿಶೋಧನೆಯಿಂದ ಬಹಿರಂಗ

ಹಣ ಪಡೆದ ಮೇಲೆ ಕೊಟ್ಟಿಗೆ, ಚರಂಡಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ತಾಲ್ಲೂಕಿನ ಮರಳವಾಡಿ ಹೋಬಳಿ ಟಿ.ಹೊಸಳ್ಳಿ ಗ್ರಾಮ ಪಂಚಾಯಿತಿಯ ನೋಡಲ್‌ ಅಧಿಕಾರಿಯಾದ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಮಧುರ ಅವರ ಅಧ್ಯಕ್ಷತೆಯಲ್ಲಿ 2ನೇ ಸುತ್ತಿನ ಸಾಮಾಜಿಕ ಲೆಕ್ಕಾ ಪರಿಶೋಧನಾ ಸಭೆಯು ಗುರುವಾರ ನಡೆಯಿತು.

ಲೆಕ್ಕಾ ಪರಿಶೋಧನಾ ಜಿಲ್ಲಾ ಸಂಯೋಜಕ ಶ್ರೀನಿವಾಶ್‌ ಲೆಕ್ಕಾ ಪರಿಶೋಧನೆಯ ಮಾಹಿತಿಯನ್ನು ಸಭೆಗೆ ನೀಡಿದರು.

‘ನರೇಗಾ ಯೋಜನೆಯಡಿ ಮಾಡಿರುವ ದನದ ಕೊಟ್ಟಿಗೆ ಮತ್ತು ಚರಂಡಿಗಳನ್ನು ಕೆಲವರು ಹಣ ಪಡೆದ ಮೇಲೆ ಒಡೆದು ಹಾಕಿರುವುದು ಲೆಕ್ಕಾ ಪರಿಶೋಧನೆ ವೇಳೆ ಕಂಡು ಬಂದಿದೆ. ಅಂತಹ ಫಲಾನಭವಿಗಳಿಗೆ ತಿಳಿವಳಿಕೆ ನೀಡಿ ಮರು ನಿರ್ಮಾಣ ಮಾಡಿಕೊಳ್ಳುವಂತೆ ತಿಳಿಸಬೇಕು’ ಎಂದು ಪಿಡಿಒ ಅವರಿಗೆ ಸೂಚಿಸಿದರು.

ನರೇಗಾ ಯೋಜನೆಯಲ್ಲಿ ಎಲ್ಲಾ ಕೂಲಿ ಕಾರ್ಮಿಕರಿಗೂ ಕೆಲಸ ಮಾಡಲು ಅವಕಾಶವಿದೆ. ಆದರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ಇಎಸ್‌ಐ ಮತ್ತು ಪಿಎಫ್‌ ಪಡೆಯುವವರಿಗೆ ನರೇಗಾದಲ್ಲಿ ಅವಕಾಶವಿಲ್ಲ. ಈ ಬಾರಿ ಲಾಕ್‌ಡೌನ್‌ ಇದ್ದುದರಿಂದ ಈ ಸಂದರ್ಭದಲ್ಲಿ ಅಂತಹ ಕಾರ್ಮಿಕರ ಹೆಸರಿನಲ್ಲಿ ಎನ್‌ಎಂಆರ್‌ ತೆಗೆಯಲಾಗಿದ್ದು ಮುಂದೆ ಅದಕ್ಕೆ ಅವಕಾಶ ಕೊಡಬಾರದೆಂದು ಎಚ್ಚರಿಸಿದರು.

ಅಗರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಚರಂಡಿ ಕಾಮಗಾರಿಯಲ್ಲಿ ಆಗಿರುವ ಕೆಲಸ ಮತ್ತು ಬಿಡಗಡೆ ಆಗಿರುವ ಹಣಕ್ಕೆ ತಾಳೆ ಆಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ ವ್ಯತ್ಯಾಸವನ್ನು ಸರಿಪಡಿಸಬೇಕು ಹಾಗೂ ಪಂಚಾಯಿತಿಯು ನರೇಗಾ ಕಾಮಗಾರಿಗಳಲ್ಲಿನ ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಳ್ಳ
ಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ಕೆಲವು ಗ್ರಾಮಗಳ ಯುವ ಮುಖಂಡರು ಮಾತನಾಡಿ, ‘ಪಿಡಿಒ ಅವರು ಕೆಲವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬೇಕಾದವರಿಗೆ ಕೆಲಸ ಕೊಡುತ್ತಾರೆ ಎಂದು ಆರೋಪಿಸಿ ತಾವು ಕೆಲಸ ಮಾಡಲಿದ್ದು
ತಮಗೂ ಅವಕಾಶ ಕೊಡಬೇಕು’ ಎಂದು ಕೇಳಿದರು.

ಪಿಡಿಒ ರಾಮಯ್ಯ ಮಾತನಾಡಿ, ‘ನರೇಗಾ ಯೋಜನೆಯಡಿ ಕೆಲಸಗಳನ್ನು ಯಾರಿಗೂ ಗುತ್ತಿಗೆ ಕೊಡಲು ಬರುವುದಿಲ್ಲ, ಅವರವರ ವೈಯಕ್ತಿಕ ಕಾಮಗಾರಿಗಳನ್ನು ಮಾಡಲು ಮಾತ್ರ ಅವಕಾಶವಿದ್ದು ಯಾರೇ ಕೆಲಸ ಮಾಡಲು ಮುಂದೆ ಬಂದರೆ ಅವರ ಕಾಮಗಾರಿಗಳನ್ನು ಅಪ್ರೂವಲ್‌ ಮಾಡಿ ಎನ್‌ಎಂಆರ್‌ ತೆಗೆದುಕೊಡಲಾಗುತ್ತದೆ’ ಎಂಂದು ತಿಳಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.

ಟಿ.ಹೊಸಳ್ಳಿ ಪಂಚಾಯಿತಿ ಆಡಳಿತಾಧಿಕಾರಿ ತೋಟಗಾರಿಕೆ ಇಲಾಖೆಯ ಹರೀಶ್‌, ಸಾಮಾಜಿಕ ಲೆಕ್ಕ ಪರಿಶೋಧನಾ ತಾಲ್ಲೂಕು ಸಂಯೋಜನಾಧಿಕಾರಿ ಕಮಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.