ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಗೃಹರಕ್ಷಕ ದಳದ ಸೇವೆಗೆ ಪ್ರಶಂಸೆ

Published 29 ಡಿಸೆಂಬರ್ 2023, 7:25 IST
Last Updated 29 ಡಿಸೆಂಬರ್ 2023, 7:25 IST
ಅಕ್ಷರ ಗಾತ್ರ

ಚನ್ನಪಟ್ಟಣ: ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆಯನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಗುರುವಾರ ಉದ್ಘಾಟಿಸಿದರು.

ಗೃಹರಕ್ಷಕ ದಳವು ಕಾನೂನು ಮತ್ತು ಸುವ್ಯವಸ್ಥೆಗೆ ನೆರವಾಗುತ್ತಿದೆ. ಗೃಹರಕ್ಷಕ ಸಿಬ್ಬಂದಿ ಸಾರ್ವಜನಿಕರ ಜೊತೆ ಸಂಯಮದಿಂದ ವರ್ತಸಬೇಕು ಎಂದು ಕಿವಿಮಾತು ಹೇಳಿದರು.

ಗೃಹ ರಕ್ಷಕದಳ ನಗರದ ಪೊಲೀಸ್ ಸಮುದಾಯ ಭವನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಗೃಹರಕ್ಷಕ ಕೆ.ಎನ್. ಶ್ರೀಕಂಠಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ಗೃಹರಕ್ಷಕ ದಳದ ಕಾರ್ಯವನ್ನು ಪ್ರಶಂಸಿದರು. ಸಂಕಷ್ಟದ ಸಮಯದಲ್ಲಿ ಹಗಲು ರಾತ್ರಿ ದುಡಿಯುವ ಗೃಹರಕ್ಷಕರನ್ನು ಸಮಾಜ ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಎಲ್. ನಿರಂಜನ್ ಹೇಳಿದರು.

 
ಸಾಹಿತಿ ವಿಜಯ್ ರಾಂಪುರ, ಸಶಸ್ತ್ರ ಮೀಸಲು ಪಡೆಯ ಇನ್ ಸ್ಪೆಕ್ಟರ್ ರವಿ, ಗೃಹರಕ್ಷಕ ದಳದ ಅಧಿಕ್ಷಕ ಆರ್.ಕೆ. ರವಿ, ಬೋಧಕ ಎಸ್.ಆರ್. ಗಾಯಕವಾಡ್ ಮಾತನಾಡಿದರು.


ಕಂಪನಿ ಕಮಾಂಡರ್ ಗಳಾದ ಚನ್ನಪಟ್ಟಣ ಘಟಕದ ವೆಂಕಟೇಶ್, ಕನಕಪುರ ಘಟಕದ ಎನ್. ವಿಜಯ್ ಕುಮಾರ್, ಘಟಕಾಧಿಕಾರಿಗಳಾದ ಬಿಡದಿ ಎನ್.ವೆಂಕಟೇಶ್, ಸಾತನೂರು ಅಭಿಲಾಷ್, ಅಕ್ಕೂರು ಆರ್.ಎಸ್.ವೆಂಕಟೇಶ್, ರಾಮನಗರ ಎನ್.ಕುಮಾರ್, ಕೋಡಿಹಳ್ಳಿ ಹನುಮಂತು, ಮಾಗಡಿ ಶಿವನಂಜಯ್ಯ, ಕುದೂರು ಕೃಷ್ಣಮೂರ್ತಿ, ಹಾರೋಹಳ್ಳಿ ಲೋಕೇಶ್, ಪ್ರಥಮ ದರ್ಜೆ ಸಹಾಯಕಿ ಸ್ವಪ್ನ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT