ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಜೀವನಶೈಲಿ: ರೋಗ ಉಲ್ಬಣ

ಫಿಟ್‌ ಇಂಡಿಯಾ ಫ್ರೀಡಂ ಅಭಿಯಾನ
Last Updated 13 ಸೆಪ್ಟೆಂಬರ್ 2021, 3:42 IST
ಅಕ್ಷರ ಗಾತ್ರ

ಬಿಡದಿ: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನೆಹರೂ ಯುವ ಕೇಂದ್ರ ಹಾಗೂ ಶ್ರೀಮುರಾರಿ ಗೆಳೆಯರ ಬಳಗದ ಸಹಯೋಗದೊಂದಿಗೆ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಫಿಟ್ ಇಂಡಿಯಾ ಫ್ರೀಡಂ ಆನ್ 2.0 ಕಾರ್ಯಕ್ರಮ ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಗದಾಂಬ ಮಾತನಾಡಿ, ಇಂದಿನ ಯುವಪೀಳಿಗೆಯ ಜೀವನಶೈಲಿಯಲ್ಲಿ ದೈನಂದಿನ ಚಟುವಟಿಕೆಗಳು ದೂರವಾಗಿವೆ. ಮನುಷ್ಯ ನಾನಾ ರೋಗಪೀಡಿತನಾಗುತ್ತಿದ್ದಾನೆ. ದೇಹ, ಮನಸ್ಸು, ಬುದ್ಧಿ ಸರಿ ಇದ್ದಾಗ ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.

ತಾಂತ್ರಿಕತೆ ಅಭಿವೃದ್ಧಿಯಾದಂತೆ ಯಾಂತ್ರಿಕ ಸೌಕರ್ಯ ಹೆಚ್ಚಾಗುತ್ತಿವೆ. ಬದುಕು ಯಾಂತ್ರಿಕವಾಗಿದೆ. ಹಿಂದೆ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದರಿಂದ ಹೆಣ್ಣುಮಕ್ಕಳಿಗೆ ವ್ಯಾಯಾಮ ಆಗುತ್ತಿತ್ತು. ಈಗ ಎಲ್ಲವೂ ಸರಾಗವಾಗಿ ಇರುವ ಕಾರಣ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಹಣಕೊಟ್ಟು ಜಿಮ್‌ಗಳಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ
ಎಂದರು.

ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಫಿಟ್ನೆಸ್ ಅಗತ್ಯವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸದೃಢ ಆರೋಗ್ಯವಂತರಾಗಬೇಕು. ಈ ಮೂಲಕ ಸದೃಢ ಭಾರತ ನಿರ್ಮಾಣ ಮಾಡುವತ್ತ ಸಾಗಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಹರೂ ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ವಾಣಿ ಕೋನರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಆದೇಶದ ಮೇರೆಗೆ ಫಿಟ್ ಇಂಡಿಯಾ ಫ್ರೀಡಂ ಆನ್ 2.0 ಕಾರ್ಯಕ್ರಮವನ್ನು ಅ. 2 ರವರೆಗೆ ಅಭಿಯಾನದ ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಡಿಎಸಿವೈಪಿ ಸದಸ್ಯ ಡಾ.ಗಿರೀಶ್ ಕುಮಾರ್ ನಾಯ್ಡು, ನೆಹರೂ ಯುವ ಕೇಂದ್ರದ ವಿಶೇಷ ಅಧಿಕಾರಿ ಎಂ.ಎನ್. ಸುಂದರಮ್ಮ, ಮುರಾರಿ ಗೆಳೆಯರ ಬಳಗದ ವಿನಯ್, ಶ್ರೀನಿವಾಸ್, ಲೋಕೇಶ್, ಉಪನ್ಯಾಸಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT