ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸಮಾಜ ನಿರ್ಮಾಣ ಅಂಬೇಡ್ಕರ್ ಗುರಿ: ಸಂಪತ್

Published 29 ಏಪ್ರಿಲ್ 2024, 5:03 IST
Last Updated 29 ಏಪ್ರಿಲ್ 2024, 5:03 IST
ಅಕ್ಷರ ಗಾತ್ರ

ಹಾರೋಹಳ್ಳಿ: ಸಂವಿಧಾನ ಜಾರಿಗೊಳಿಸಿ ಸಮಸಮಾಜ ನಿರ್ಮಾಣ ಮಾಡುವುದೇ ಅಂಬೇಡ್ಕರ್ ಗುರಿಯಾಗಿತ್ತು ಎಂದು ಗ್ರಾಮದ ಯುವ ಮುಖಂಡ ಸಂಪತ್ ತಿಳಿಸಿದರು.

ತಾಲ್ಲೂಕಿನ ಯಡವನಹಳ್ಳಿಯಲ್ಲಿ ಭಾನುವಾರ ನಡೆದ ಅಂಬೇಡ್ಕರ್ 133ನೇ ಜಯಂತಿಯಲ್ಲಿ ಸಂವಿಧಾನ ಪೀಠಿಕೆ ಬೋಧಿಸಿ ಮಾತನಾಡಿದರು. ಅಂಬೇಡ್ಕರ್ ತಮ್ಮೆಲ್ಲ ಜ್ಞಾನ ಉಪಯೋಗಿಸಿಕೊಂಡು ಸಂವಿಧಾನ ರೂಪಿಸಿ, ಸಾಮಾಜಿಕ ನ್ಯಾಯ ಜಾರಿ ಮಾಡುವ ನಿಟ್ಟಿನಲ್ಲಿ ಶ್ರಮಿಸಿದರು ಎಂದರು.

ಈ ದಿಸೆಯಲ್ಲಿ ಅನೇಕ ಏಳು–ಬೀಳು ವೈಯಕ್ತಿಕ ಜೀವನದಲ್ಲಿ ಅನುಭವಿಸಿದರೂ ಯಾವುದೇ ಹಂತದಲ್ಲಿ ಎದೆಗುಂದಲಿಲ್ಲ. ಯುವ ಪೀಳಿಗೆ ಅಂಬೇಡ್ಕರ್ ಜೀವನ ಚರಿತ್ರೆ ಓದಿ ಪಠಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಘನತೆಯಿಂದ ಬದುಕುವುದಕ್ಕಾಗಿ ಬೇಕಾದ ಹಕ್ಕುಗಳಿಗೆ ಸಂವಿಧಾನದ ಮೂಲಕ ಕಾನೂನಿನ ಮಾನ್ಯತೆ ಕಲ್ಪಿಸಿಕೊಟ್ಟರು ಎಂದು ಹೇಳಿದರು.

ಗ್ರಾಮದ ಯುವಕರಾದ ನಾಗೇಶ್, ವೆಂಕಟರಾಮು, ಹೇಮಂತ್, ರಾಮಚಂದ್ರ, ಜಯರಾಮ್, ಚಿಕ್ಕಬಸಮ್ಮ,ಅಶ್ವಿನಿ, ಪದ್ಮ, ರಾಜೇಶ್ವರಿ, ಪದ್ಮ, ವಿಜಯ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT