ಮಂಗಳವಾರ, ಮಾರ್ಚ್ 2, 2021
30 °C

ಕಲ್ಲಹಳ್ಳಿ ದೇವಾಲಯದಲ್ಲಿ ಆಷಾಢ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಇಲ್ಲಿನ ಧಾರ್ಮಿಕ ಪ್ರಸಿದ್ಧ ಚಿಕ್ಕತಿರುಪತಿ ಎಂದೇ ಹೆಸರಾಗಿರುವ ಶ್ರೀ ಕಲ್ಲಹಳ್ಳಿ ಶ್ರೀನಿವಾಸನ ದೇವಾಲಯದಲ್ಲಿ ಆಷಾಢ ಮಾಸದ ಮೊದಲನೇ ಶ್ರಾವಣ ಶನಿವಾರದ ಪೂಜಾ ಕಾರ್ಯ ವಿಜೃಂಭಣೆಯಿಂದ ನೆರವೇರಿತು.

ಶನಿವಾರ ದೇವಸ್ಥಾನದಲ್ಲಿ ಶ್ರೀನಿವಾಸಮೂರ್ತಿಗೆ ಫಲಪುಷ್ಪ, ಚಿನ್ನಾಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಬೆಳಿಗ್ಗೆ 6 ಗಂಟೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಸಲಾಗಿತ್ತು. ರಾತ್ರಿ 8.30ರ ವರೆಗೂ ಭಕ್ತರು ದೇವರ ದರ್ಶನ ಪಡೆದರು. ದೇವಾಲಯ ಪ್ರಸಾದ ವಿನಿಯೋಗ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ತಾಲ್ಲೂಕಿನ ನಾನಾ ಭಾಗಗಳಿಂದ ಹಾಗೂ ಬೆಂಗಳೂರಿನಿಂದ ಹೆಚ್ಚಿನ ಭಕ್ತರು ಶ್ರೀನಿವಾಸನ ದರ್ಶನಕ್ಕೆ ಬಂದಿದ್ದರು. ಸುಮಾರು 6 ಸಾವಿರದಷ್ಟು ಭಕ್ತರು ದೇವರ ದರ್ಶನ ಮಾಡಿದ್ದಾರೆ, ಪ್ರಸಾದದ ವ್ಯವಸ್ಥೆಯನ್ನು ಭಕ್ತರ ಸಹಕಾರದಿಂದಲೇ ಮಾಡಲಾಗಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.