ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಸೋಂಕು ತಡೆಗೆ ಸಹಕರಿಸಿ’

Last Updated 18 ಜುಲೈ 2021, 5:40 IST
ಅಕ್ಷರ ಗಾತ್ರ

ಕನಕಪುರ: ‘ಕೊರೊನಾ ಸೋಂಕಿನಿಂದ ಸಮಾಜ ಇನ್ನೂ ಮುಕ್ತವಾಗಿಲ್ಲ. ಸಮಾಜವನ್ನು ಕೊರೊನಾದಿಂದ ಮುಕ್ತವಾಗಿಸಲು ನಾವೆಲ್ಲಾ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ’ ಎಂದು ಕನಕಪುರ ರೋಟರಿ ಸಂಸ್ಥೆಯ ಗೌರವಾಧ್ಯಕ್ಷ ಎಂ.ಡಿ. ವಿಜಯದೇವು ತಿಳಿಸಿದರು.

ಇಲ್ಲಿನ ರೋಟರಿ ಭವನದಲ್ಲಿ ಕನಕಪುರ ರೋಟರಿ ಸಂಸ್ಥೆಯಿಂದ ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೆಗೆದುಕೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಎನ್‌-95 ಮಾಸ್ಕ್‌ ಮತ್ತು 26 ಪಲ್ಸ್‌ ಆಕ್ಸಿಮೀಟರ್‌ ವಿತರಿಸಿ ಅವರು ಮಾತನಾಡಿದರು.

ಕೊರೊನಾ ಎರಡನೇ ಅಲೆಯು ಸಮಾಜದ ಮೇಲೆ ಭೀಕರ ಪರೀಣಾಮ ಬೀರಿದೆ. ಸಾಕಷ್ಟು ಉದ್ಯಮಗಳಿಗೂ ಪೆಟ್ಟು ನೀಡಿದೆ. ಶಿಕ್ಷಣ ವ್ಯವಸ್ಥೆ ಮೇಲೆ ಕರಿನೆರಳು ಆವರಿಸಿದೆ. ಆರ್ಥಿಕ ಪ್ರಗತಿ ಯ ಹಿನ್ನಡೆಯಿಂದ ದೇಶ ಸುಮಾರು ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಹೇಳಿದರು.

ರೋಟರಿ ಅಧ್ಯಕ್ಷ ಆನಮಾನಹಳ್ಳಿ ನಟೇಶ್‌ ಮಾತನಾಡಿ, ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು 2,250 ವಿದ್ಯಾರ್ಥಿಗಳಿಗೆ ₹ 50 ಬೆಲೆಯ ಎನ್‌-95 ಮಾಸ್ಕ್‌ಗಳನ್ನು₹ 2 ಲಕ್ಷ ವೆಚ್ಚದಲ್ಲಿ ಖರೀದಿಸಿ ಕೊಡಲಾಗುತ್ತಿದೆ. ಮುಂದೆಯು ಇಂತಹ ಸೇವಾ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಟಿ.ವಿ.ಎನ್‌. ಪ್ರಸಾದ್‌, ರೋಟರಿ ಮಾಜಿ ಅಧ್ಯಕ್ಷ ಭಾನುಪ್ರಕಾಶ್‌, ಕಾರ್ಯದರ್ಶಿ ಸಂತೋಷ್‌, ಪದಾಧಿಕಾರಿಗಳಾದ ಗವಿರಾಜು, ರಂಜನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT