ಮಾಗಡಿ: ತಾಲ್ಲೂಕಿನ ಸೋಲೂರು ನಾರಾಯಣ ಗುರುಮಠದ ಆವರಣದ ಜೆ.ಪಿ.ನಾರಾಯಣಸ್ವಾಮಿ ಭವನದಲ್ಲಿ ಭಾನುವಾರ ಬೆಂಗಳೂರಿನ ಆಸರಾ ಸ್ವಯಂಸೇವಾ ಸಂಸ್ಥೆ ವತಿಯಿಂದ ವಿವಿಧ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸಲಾಯಿತು.
ಸಾಹಿತಿ ಡಾ.ಸೋಲೂರು ಸತೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಕಟ್ಟಡಗಳ ದುರಸ್ತಿಗೆ ಮುಂದಾಗಿರುವ ಆಸರೆ ಸಂಸ್ಥೆ ಸೇವೆ ಅನನ್ಯ. ಸರ್ಕಾರಿ ಶಾಲೆಗಳ ಶಿಕ್ಷಕರು ಸಂಸ್ಥೆ ಅನುಕೂಲ ಸದುಪಯೋಗಪಡಿಸಿಕೊಳ್ಳಬೇಕು. ಹಳ್ಳಿಗಾಡಿನಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಸೂಕ್ತಮಾರ್ಗದರ್ಶನ ಮತ್ತು ನೆರವಿನ ಅಗತ್ಯವಿದೆ. ಶಿಕ್ಷಕರು ನಿತ್ಯ ಅಧ್ಯಯನ ನಡೆಸಬೇಕು ಎಂದರು.
ಆಸರೆ ಸಂಸ್ಥೆ ವಿಕಾಸ್ ಜೈನ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಿಗೆ ಸೇರಿಸಿದರೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಸೋಲೂರಿನ ರವಿ, ಶಿಕ್ಷಕ–ಶಿಕ್ಷಕಿಯರು ಮತ್ತು ಮಕ್ಕಳು ಹಾಗೂ ಆಸರಾ ಸ್ವಯಂ ಸೇವಾ ಸಂಸ್ಥೆ ಪದಾಧಿಕಾರಿಗಳು ಇದ್ದರು.
ಮಾಗಡಿ ಸೋಲೂರಿನ ನಾರಾಯಣಗುರುಮಠದಲ್ಲಿ ನಡೆದ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣಾ ಸಮಾರಂಭದಲ್ಲಿ ಅಸರಾ ಸಂಸ್ಥೆಯ ಪದಾಧಿಕಾರಿಗಳು ಇದ್ದರು.