ಶುಕ್ರವಾರ, ಸೆಪ್ಟೆಂಬರ್ 17, 2021
24 °C

6 ರಿಂದ ಬಾಣಂತ ಮಾರಮ್ಮ ದೇವಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಸಬಾ (ಕನಕಪುರ): ತಾಲ್ಲೂಕಿನ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಮೇಗಳದೊಡ್ಡಿ ಗ್ರಾಮದಲ್ಲಿರುವ ಬಾಣಂತ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವು ಮೇ 6 ರಿಂದ 8 ರ ವರೆಗೆ ನಡೆಯಲಿದೆ.

ಸೋಮವಾರ ರಾತ್ರಿ ಬಾಣಂತ ಮಾರಮ್ಮ ದೇವಿಯ ಅಗ್ನಿಕೊಂಡದ ಎಳವಾರ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಬಾಣಂತ ಮಾರಮ್ಮ, ಮದ್ದೂರಮ್ಮ, ಆಂಜನೇಯಸ್ವಾಮಿ, ನರಸಿಂಹಸ್ವಾಮಿಯ ಮೆರವಣಿಗೆಯೊಂದಿಗೆ ದೇವರನ್ನು ಅಗ್ನಿಕೊಂಡದ ವರೆಗೂ ಕರೆತರಲಾಗುವುದು. ನಂತರ ಬಾಣಂತ ಮಾರಮ್ಮ ಅಗ್ನಿಕೊಂಡವು ನೆರವೇರುವುದು.

ಸಂಜೆ ನರಸಿಂಹಸ್ವಾಮಿ ಮತ್ತು ಆಂಜನೇಯಸ್ವಾಮಿಯನ್ನು ಹುಲಿ ವಾನದ ಮೇಲೆ ಮೆರವಣಿಗೆ, ಬಾಣಂತ ಮಾರಮ್ಮ ಮತ್ತು ಮದ್ದೂರಮ್ಮ ದೇವಿಯ ಪೂಜೆಯೊಂದಿಗೆ ರಾತ್ರಿ ಗ್ರಾಮದಲ್ಲಿ ಮೆರವಣಿಗೆ ನಡೆಯುವುದು. ಬುಧವಾರ ಬೆಳಿಗ್ಗೆ ಗ್ರಾಮದಲ್ಲಿ ಊಟದ ಕಾರ್ಯ ನೆರವೇರುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು