ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ: 'ಭಾವ ಬುತ್ತಿ' ಕವನ ಸಂಕಲನ ಬಿಡುಗಡೆ

Published : 31 ಆಗಸ್ಟ್ 2024, 15:56 IST
Last Updated : 31 ಆಗಸ್ಟ್ 2024, 15:56 IST
ಫಾಲೋ ಮಾಡಿ
Comments

ಕನಕಪುರ: ಯಾವುದೇ ನಿರ್ಬಂಧಗಳಿಲ್ಲದೆ ತನ್ನ ಮನಸ್ಸಿನ ಇಚ್ಛೆಯಂತೆ, ತನ್ನ ಅಂತರಂಗದ ಭಾವನೆಗಳನ್ನು ಮತ್ತು ಆಶಯಗಳನ್ನು ಸ್ವತಂತ್ರವಾಗಿ ಅಭಿವ್ಯಕ್ತ ಪಡಿಸುವವರೇ ನಿಜವಾದ ಸಾಹಿತಿ ಎಂದು ಉಪನ್ಯಾಸಕ ಎಚ್.ಎಸ್.ನಾಗೇಶ್ ತಿಳಿಸಿದರು.

ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ, ಹುಣಸನಹಳ್ಳಿ ಶಾಂತಿನಿಕೇತನ ವಿದ್ಯಾಮಂದಿರದಲ್ಲಿ ನಡೆದ ಸಾಹಿತಿ ಹು.ನಾ.ನಾಗೇಂದ್ರ ಅವರ 'ಭಾವ ಬುತ್ತಿ' ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸ್ವಾಮಿ ಪೊನ್ನಾಚಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದಿನ ಸದಭಿರುಚಿಯನ್ನು ಬೆಳೆಸಬೇಕು ಎಂದರು. 

ಲೇಖಕ ಬಿಳಿದಾಳೆ ಪಾರ್ವತೀಶ ಮಾತನಾಡಿ ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಬೇಕಾಗಿದೆ ಎಂದು ಹೇಳಿದರು.

ಶಾಂತಿನಿಕೇತನ ವಿದ್ಯಾಮಂದಿರದ ಕಾರ್ಯದರ್ಶಿ ಸಂತೋಷ್, ಸಾಹಿತಿಗಳಾದ ಗಟ್ಟಿಗುಂದ ಮಹಾದೇವ, ಜಯರಾಮ್, ಹನುಮಂತ ಸ್ವರಚಿತ ಕವನಗಳನ್ನು ವಾಚಿಸಿದರು. ಕಲಾವಿದರಾದ ಏರಂಕೆರೆ ಶಿವರಾಂ, ರಮೇಶ್ ಆಲನತ್ತ ಜನಪದ ಗೀತೆಗಳನ್ನು ಹಾಡಿದರು. ಸಾಹಿತಿ ಎಲ್ಲೇಗೌಡ ಬೆಸಗರಹಳ್ಳಿ, ಬಮೂಲ್ ಅಧ್ಯಕ್ಷ ಎಚ್.ಪಿ. ರಾಜಕುಮಾರ, ಸ್ಥಳೀಯರಾದ ಆಶಾ ಮಹೇಶ್ವರ್ ಸಿಂಗ್, ಶೋಭಾ, ಚೈತ್ರ, ಸಂತೋಷ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT