ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ನಲ್ಲಿ ಏಕಾಏಕಿ ಹೊಗೆ

Published 5 ಏಪ್ರಿಲ್ 2024, 19:10 IST
Last Updated 5 ಏಪ್ರಿಲ್ 2024, 19:10 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಬಿಡದಿ ರೈಲು ನಿಲ್ದಾಣದ ಬಳಿ ಇರುವ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಪೊದಲ್ಲಿ ನಿಂತಿದ್ದ ಬಸ್ಸೊಂದರಲ್ಲಿ ಶುಕ್ರವಾರ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದ್ದರಿಂದ, ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಡಿಪೊದ ಹೊರ ಆವರಣದಲ್ಲಿ ಬಿಸಿಲಿನಲ್ಲಿ ನಿಂತಿದ್ದ ಬಸ್‌ನಲ್ಲಿ ಮಧ್ಯಾಹ್ನ 3.30ರ ಹೊತ್ತಿಗೆ ಎಂಜಿನ್‌ನಲ್ಲಿ ಏಕಾಏಕಿಯಾಗಿ ಕಪ್ಪು ಹೊಗೆ ಕಾಣಿಸಿಕೊಳ್ಳಲಾರಂಭಿಸಿತು. ಇನ್ನೇನು ಬೆಂಕಿ ಹೊತ್ತಿಕೊಳ್ಳಲಿದೆ ಎಂದು ಬಸ್ ಅಕ್ಕಪಕ್ಕದಲ್ಲಿದ್ದವರು ದೂರು ಓಡಿದರು. ಆಗ ತಾಂತ್ರಿಕ ಸಿಬ್ಭಂದಿ ಬೆಂಕಿ ನಂದಿಸುವ ಉಪಕರಣವನ್ನು ಹೊಗೆ ಬರುತ್ತಿದ್ದ ಜಾಗಕ್ಕೆ ಸಿಂಪಡಿಸಿದರು. ಆಗ ಹೊಗೆ ಬರುವುದು ನಿಂತಿತು.

ಬಿಸಿಲಿಗೆ ಎಂಜಿನ್ ಹೆಚ್ಚು ಕಾದಿರುವುದರಿಂದಲೂ ಈ ರೀತಿಯ ಸಮಸ್ಯೆಯಾಗಿರುವ ಸಾಧ್ಯತೆ ಇರಬಹುದು. ಘಟನೆಗೆ ನಿಖರ ಕಾರಣ ಕುರಿತು ಡಿಪೊ ಸಿಬ್ಭಂದಿ ಬಸ್‌ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT