ರಾಮನಗರ ತಾಲ್ಲೂಕಿನ ಪಾಲಾಭೋವಿದೊಡ್ಡಿಯ ಗದ್ದೆಯಲ್ಲಿ ಗುರುವಾರ ಭಾರಿ ಗಾತ್ರದ ಹೆಬ್ಬಾವು ಪತ್ತೆಯಾಗಿದೆ. ಅರ್ಕಾವತಿ ನದಿಯ ದಂಡೆ ಬಳಿ ಇರುವ ಚಂದ್ರೇಗೌಡ ಎಂಬುವರ ಗದ್ದೆಯಲ್ಲಿ ಬೆಳಿಗ್ಗೆ ಕಾರ್ಮಿಕರು ಭತ್ತದ ಪೈರು ಕೊಯ್ಲು ಮಾಡುವಾಗ ಪೈರುಗಳ ಮಧ್ಯೆ ಹೆಬ್ಬಾವು ಮಲಗಿತ್ತು. ಸ್ಥಳೀಯ ಉರಗ ರಕ್ಷಕ ಸ್ನೇಕ್ ಹರೀಶ್ ಅವರು ಹಾವನ್ನು ಹಿಡಿದಿದ್ದಾರೆ. ‘ಹಾವನ್ನು ರಾಮದೇವರ ಬೆಟ್ಟದ ಕಾಡಿಗೆ ಬಿಡಲಾಯಿತು’ ಎಂದು ಆರ್ಎಫ್ಒ ಮೊಹಮ್ಮದ್ ಮನ್ಸೂರ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.