ಮಂಗಳವಾರ, ಸೆಪ್ಟೆಂಬರ್ 21, 2021
21 °C

ರಾಮನಗರ: ಕರಗದ ಮೇಲೆ ಕರಿನೆರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕೋವಿಡ್ ಹಿನ್ನೆಲೆಯಲ್ಲಿ ನಗರದ ದೇಗುಲಗಳಲ್ಲಿಯೂ ಕರಗ ಆಚರಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು, ಭಕ್ತರಲ್ಲಿ ನಿರಾಸೆ
ಮೂಡಿಸಿದೆ.

ರಾಮನಗರದಲ್ಲಿ ಕರಗ ಮಹೋತ್ಸವ ಪ್ರಮುಖ ಆಚರಣೆ ಆಗಿದೆ. ಸಪ್ತ ಮಾತೃಕೆಯರ ಆರಾಧನೆಯು ವಿಶಿಷ್ಟ ಬಗೆಯಲ್ಲಿ ನಡೆಯುತ್ತ ಬಂದಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಹಬ್ಬ ಆಚರಣೆಗೆ ಅವಕಾಶ ಇರಲಿಲ್ಲ.

ಆದರೆ ದೇಗುಲಗಳ ಒಳಗೇ ಧಾರ್ಮಿಕ ಆಚರಣೆಗಳಿಗೆ ಅನುಮತಿ ಇತ್ತು. ಈ ಬಾರಿಯೂ ಆರಂಭದಲ್ಲಿ ದೇವಾಲಯಗಳಲ್ಲಿ ಈ ಆಚರಣೆ ನಡೆದಿದ್ದವು.

ಆದರೆ, ಸದ್ಯ ಜಿಲ್ಲಾಡಳಿತ ಈ ಧಾರ್ಮಿಕ ಆಚರಣೆಗಳ ಮೇಲೂ ನಿರ್ಬಂಧ ಹೇರಿದೆ.

ಕೋವಿಡ್ ನಿಯಮಾವಳಿಯಂತೆ ದೇಗುಲಗಳಲ್ಲಿ ಪೂಜೆಗೆ ಮಾತ್ರ ಅವಕಾಶ ಇದೆ. ಅದರಂತೆಯೇ ನಡೆದುಕೊಳ್ಳಬೇಕು. ಜನ ಸೇರುವಂತಹ ಯಾವುದೇ ಆಚರಣೆಗಳನ್ನು ಹಮ್ಮಿಕೊಳ್ಳಬಾರದು ಎಂದು ಸಂಬಂಧಿಸಿದ ಟ್ರಸ್ಟ್‌ಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ. ಹೀಗಾಗಿ, ಈ ಬಾರಿಯ ಚಾಮುಂಡೇಶ್ವರಿ ಕರಗ ಆಚರಣೆ ಬಗ್ಗೆ ಭಕ್ತರಲ್ಲಿ ಗೊಂದಲ ಉಂಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.