ಗುರುವಾರ , ನವೆಂಬರ್ 21, 2019
22 °C

ಅಪಘಾತ: ಆಟೊ ಚಾಲಕನಿಗೆ ತೀವ್ರ ಗಾಯ

Published:
Updated:
Prajavani

ರಾಮನಗರ: ಇಲ್ಲಿನ ಮಿನಿ ವಿಧಾನಸೌಧ ಮುಂಭಾಗ ಶನಿವಾರ ಮಧ್ಯಾಹ್ನ ಆಟೊ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಆಟೊ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮಿನಿ ವಿಧಾಸೌಧದ ಮುಂಭಾಗ ರಸ್ತೆ ವಿಭಜಕ ದಾಟುತ್ತಿದ್ದ ಆಟೊಗೆ ಮುಂಭಾಗದಿಂದ ಬಸ್ ಡಿಕ್ಕಿಯಾಯಿತು. ಅಪಘಾತದ ರಭಸಕ್ಕೆ ಚಾಲಕನಿಗೆ ತೀವ್ರ ಪೆಟ್ಟಾಗಿದ್ದು, ಆಟೊ ಜಖಂಗೊಂಡಿತು. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆತನ ಗುರುತು ತಿಳಿದುಬಂದಿಲ್ಲ. ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯಿಂದ ಕೆಲ ಹೊತ್ತು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಗಿತ್ತು. ಅಪಘಾತದ ನಂತರ ಚಾಲಕ ಬಸ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿ ಆಗಿದ್ದು, ಅಲ್ಲಿದ್ದ ಪ್ರಯಾಣಿಕರನ್ನು ಬೇರೊಂದು ಬಸ್‌ನಲ್ಲಿ ಕಳುಹಿಸಲಾಯಿತು.

ಪ್ರತಿಕ್ರಿಯಿಸಿ (+)