ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಬಿಎಸ್‌ಇ ಫಲಿತಾಂಶ: ತ್ಯಾಗರಾಜು ಶಾಲೆ ಉತ್ತಮ ಸಾಧನೆ

Published 17 ಮೇ 2024, 6:20 IST
Last Updated 17 ಮೇ 2024, 6:20 IST
ಅಕ್ಷರ ಗಾತ್ರ

ಬಿಡದಿ: ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್) 12ನೇ ತರಗತಿ ಪರೀಕ್ಷೆಯಲ್ಲಿ ಇಲ್ಲಿನ ತ್ಯಾಗರಾಜು ಸೆಂಟ್ರಲ್ ಶಾಲೆಯು ಶೇ 100ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ. ಮಾರ್ಚ್‌ನಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಶಾಲೆಯ ವಿಜ್ಞಾನ ವಿಭಾಗದ ಪರೀಕ್ಷೆಗೆ ಹಾಜರಾಗಿದ್ದ 33 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಉರ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 8 ಮಂದಿ ಅತ್ಯುತ್ತಮ ಶ್ರೇಣಿ, 20 ಪ್ರಥಮ ಹಾಗೂ ಐವರು ದ್ವಿತೀಯ ಶ್ರೇಣೆ ಪಡೆದಿದ್ದಾರೆ. ವಿದ್ಯಾರ್ಥಿ ಮಾದೇಶ್ ಗೌಡ ಶೇ 91ರಷ್ಟು ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ಕುಶಾಲ್ ಗೌಡ ಶೇ 89, ಪ್ರತೀಕ್ಷಾ ಡಿ. ಶೇ 88 ಹಾಗೂ ಹೇಮಾ ಬಿ.ಆರ್ ಶೇ 87.4 ಅಂಕ ಪಡೆದಿದ್ದಾರೆ.

‘ಗ್ರಾಮೀಣ ಭಾಗದ ಮಕ್ಕಳಿಗೆ ನೀಟ್, ಜೆಇಇ, ಐಐಟಿಯಂತಹ ಪರೀಕ್ಷೆಗಳನ್ನು ಎದುರಿಸಲು ಸಹಾಯವಾಗುವಂತೆ ದೀಕ್ಷಾ ಸಹಯೋಗದಲ್ಲಿ, ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಿಕ್ಷಣ ನೀಡುತ್ತಿದ್ದೇವೆ. ಈ ಸಾಲಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಮೊದಲ ಹಂತದ ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಜೆಇಇ ಅಡ್ವಾನ್ಸ್‌ಗೆ ಆಯ್ಕೆಯಾಗಿದ್ದಾರೆ’ ಎಂದು ಶಾಲೆಯ ಸಿಇಒ ಸಂದೀಪ್ ತಿಳಿಸಿದ್ದಾರೆ.

10ನೇ ತರಗತಿಯಲ್ಲಿ ಉತ್ತಮ ಫಲಿತಾಂಶ

ಬಿಡದಿ: ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ ಇಲ್ಲಿನ ತ್ಯಾಗರಾಜು ಸೆಂಟ್ರಲ್ ಶಾಲೆಯು ಉತ್ತಮ ಫಲಿತಾಂಶ ಪಡೆದಿದೆ. ಮಾರ್ಚ್‌ನಲ್ಲಿ ನಡೆದ ಪರೀಕ್ಷೆಗೆ 121 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 16 ಮಂದಿ ಅತ್ಯುತ್ತಮ ಶ್ರೇಣಿ, 77 ಪ್ರಥಮ ಶ್ರೇಣಿ ಹಾಗೂ 28 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿ ಅಭಿಷೇಕ್ 600ಕ್ಕೆ 569(ಶೇ 95) ಅಂಕಗಳನ್ನು ಪಡೆದು ರಾಮನಗರ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಉಳಿದಂತೆ ಧನ್ಯ ಎಸ್. 556 ಅಂಕ (ಶೇ 93), ಮಾನ್ಯ ಎಂ. 553 ಅಂಕ (ಶೇ 92.17), ಗಾನವಿ ಸಿ. 552 ಅಂಕ (ಶೇ 92), ಯಶಸ್ವಿನಿ 539 ಅಂಕ (ಶೇ 90) ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಶಾಲೆ ಕಾರ್ಯದರ್ಶಿ ಸರ್ವೇಶ್, ಸಿಇಒ ಸಂದೀಪ್, ಪ್ರಾಚಾರ್ಯೆ ವಿದ್ಯಾಲಕ್ಷ್ಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT