
ಈಜುಕೊಳ ಕಾಮಗಾರಿ ಕೆಲವು ತಾಂತ್ರಿಕ ದೋಷಗಳಿಂದ ಸ್ಥಗಿತವಾಗಿವೆ. ಈಜುಕೊಳ ಕಾಮಗಾರಿ ಪುನರ್ ಆರಂಭಿಸಲು ಹೊಸದಾಗಿ ಎಲ್ಲಾ ಪ್ರಕ್ರಿಯೆ ಮಾಡಬೇಕಿದೆ. ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಈಗ ಯೋಜನಾ ಪ್ರಾಧಿಕಾರವಾಗಿ ಬದಲಾಗಿದೆ. ಈ ಬಗ್ಗೆ ರಾಮನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರದ ಗಮನ ಸೆಳೆಯಲಾಗುವುದು.
-ಪ್ರಮೋದ್, ಅಧ್ಯಕ್ಷರು ಚನ್ನಪಟ್ಟಣ ಯೋಜನಾ ಪ್ರಾಧಿಕಾರ
ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ನಿರ್ಮಾಣ ಮಾಡುತ್ತಿದ್ದ ಈಜುಕೊಳ ನಿರ್ಮಾಣ ಹತ್ತು ವರ್ಷದಿಂದ ನನೆಗುದಿಗೆ ಬಿದ್ದಿರುವುದು ಖಂಡನೀಯ. ಈ ರೀತಿ ಕಾಮಗಾರಿಯನ್ನು ಅರ್ಧಂಬರ್ಧ ಮಾಡಿ ನಿಲ್ಲಿಸುವುದು ಸಾರ್ವಜನಿಕರ ಹಣದ ಪೋಲಲ್ಲದೆ ಮತ್ತೇನು ಅಲ್ಲ. ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಲಿ.
-ಮತ್ತೀಕೆರೆ ಹನುಮಂತಯ್ಯ, ಚನ್ನಪಟ್ಟಣ
ನಗರದ ಹೊರವಲಯದಲ್ಲಿ ನಿರ್ಮಾಣ ಮಾಡಿ ಹಾಗೆಯೇ ಬಿಟ್ಟಿರುವ ಈಜುಕೊಳವನ್ನು ಸಂಬಂಧಪಟ್ಟವರು ಸ್ಥಳೀಯ ನಗರಸಭೆಗೆ ವಹಿಸುವುದು ಉತ್ತಮ. ನಗರಸಭೆಯು ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಇಂತಿಷ್ಟು ದರ ನಿಗದಿ ಮಾಡಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಿ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
- ಶಿವಣ್ಣ, ಚನ್ನಪಟ್ಟಣಈಜುಕೊಳ ನಿರ್ಮಾಣಕ್ಕೆ ತೋಡಿರುವ ಗುಂಡಿಯ ಸ್ಥಿತಿ
ಈಜುಕೊಳ ಕಟ್ಟಡದ ಒಳಭಾಗದಲ್ಲಿ ಅರ್ಧಕ್ಕೆ ನಿಂತಿರುವ ಡ್ರಸ್ಸಿಂಗ್ ಕೊಠಡಿಗಳು
ಈಜುಕೊಳ ಕಟ್ಟಡದ ಒಳಭಾಗದಲ್ಲಿ ಮದ್ಯದ ಬಾಟಲ್‌ಗಳು