ಗುರುವಾರ , ಜನವರಿ 28, 2021
15 °C

ಹಸಿವಿನಿಂದ ಬಳಲಿದ ಚಿರತೆಗೆ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನಗರದ ಹೊರವಲಯದಲ್ಲಿರುವ ಚಾಮುಂಡಿಪುರದ ತೆಂಗಿನ ತೋಟವೊಂದರಲ್ಲಿ ಮಂಗಳವಾರ ಆಹಾರವಿಲ್ಲದೆ ಚಿರತೆಯೊಂದು ಅಸ್ವಸ್ಥಗೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಿಸಿ ಉಪಚರಿಸಿದರು.

ಸೋಮವಾರ ರಾತ್ರಿ ಆಹಾರ ಅರಸಿ ಚಿರತೆ ಗ್ರಾಮದತ್ತ ಬಂದಿದ್ದು, ಎಲ್ಲಿಯೂ ಆಹಾರ ಸಿಗದ ಕಾರಣ ಹಸಿವಿನಿಂದ ನಿತ್ರಾಣಗೊಂಡು ತೆಂಗಿನ ತೋಟದಲ್ಲೇ ಮಲಗಿತ್ತು. ಬೆಳಗ್ಗೆ ಗ್ರಾಮದ ಯುವಕರು ಇದನ್ನು ಗಮನಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಚಿರತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ರಕ್ಷಣೆ ಮಾಡಿದರು. ನಂತರ ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪಶುವೈದ್ಯರು ಚಿರತೆಗೆ ಪ್ರೋಟೀನ್ ಇಂಜೆಕ್ಷನ್‌ ನೀಡಿದರು. ತರವಾಯ ಅದನ್ನು ಅರಣ್ಯ ಇಲಾಖೆಯ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

‘ಮೂರು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಹಸಿವಿನಿಂದ ಬಳಲಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸೂಕ್ತ ಚಿಕಿತ್ಸೆ ಬಳಿಕ ಅದನ್ನು ಕಾಡಿಗೆ ಬಿಡಲಾಗುವುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.