ಕನಕಪುರ: ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್ಮಸ್ ಆಚರಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ನಗರದ ಎಲ್ಐಸಿ ಕಚೇರಿ ಪಕ್ಕದ ಚರ್ಚ್ ಅನ್ನು ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕ್ರೈಸ್ತ ಸಮುದಾಯದವರ ಮನೆಗಳನ್ನು ಆಕಾಶಬುಟ್ಟಿ, ನಕ್ಷತ್ರ ಹಾಗೂ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.

ಡಿ.24ರ ಸಂಜೆಯಿಂದಲೇ ಕ್ರಿಸ್ಮಸ್ ಆಚರಣೆ ಆರಂಭವಾಗುತ್ತದೆ. ಸಮೂಹಗಾನ, ಪ್ರಾರ್ಥನೆ, ಸಿಹಿ ತಿನಿಸು, ಮಕ್ಕಳ ನೃತ್ಯ, ಹಾಡು ಮೆರುಗು ನೀಡುತ್ತವೆ. 25ರಂದು ಬೆಳಗ್ಗೆ ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಕ್ರಿಸ್ತನ ಸಂದೇಶ ವಾಚನ, ಸಮೂಹಗಾನ ನಡೆಯುತ್ತವೆ.

ಕ್ರೈಸ್ತ ಸಮುದಾಯದ ಕುಟುಂಬ ಸದಸ್ಯರು ಹೊಸ ಬಟ್ಟೆ, ಉಡುಗೊರೆ ಖರೀದಿ ಮುಗಿಸಿದ್ದು ಬಗೆ, ಬಗೆಯ ಖಾದ್ಯಗಳ ಜೊತೆ ಕೇಕ್ ತಯಾರಿಸಿದ್ದಾರೆ.

ಹಾರೋಬೆಲೆಯ ದೊಡ್ಡ ಚರ್ಚ್ನಲ್ಲಿ ವಿಜೃಂಭಣೆಯಿಂದ ಕ್ರಿಸ್ಮಸ್ ಆಚರಿಸಲಾಗುತ್ತದೆ. ಕನಕಪುರದ ವಾಣಿ ಟಾಕೀಸ್ ಪಕ್ಕದ ಚರ್ಚ್ ಹಬ್ಬಕ್ಕಾಗಿ ಸಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.