ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ಅಂಗಡಿಗಳು ಸ್ವಯಂ ಪ್ರೇರಿತ ಬಂದ್‌

Last Updated 18 ಜೂನ್ 2020, 14:19 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿನ ಬಟ್ಟೆ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡುತ್ತಿರುವುದಾಗಿ ಜವಳಿ ವರ್ತಕರ ಸಂಘ ತಿಳಿಸಿದೆ.

ನಗರಸಭೆ ಆಯುಕ್ತರಿಗೆ ಅಂಗಡಿ ಬಂದ್‌ ಮಾಡುತ್ತಿರುವ ಸಂಬಂಧ ಜವಳಿ ವರ್ತಕರ ಸಂಘದಿಂದ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.

ನಗರದಲ್ಲಿ ಜೂನ್‌ 9 ರಂದು ಕೊರೊನಾ ಸೋಂಕು ಪತ್ತೆಯಾಯಿತು. ನಂತರದ ದಿನದಲ್ಲಿ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಜೂನ್‌ 18 ರಿಂದ 30ರವರೆಗೂ ಎಲ್ಲ ಬಟ್ಟೆ ಅಂಗಡಿಗಳನ್ನು ಬಂದ್‌ ಮಾಡಲಾಗುವುದು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಸಂಘದ ಉಪಾಧ್ಯಕ್ಷ ಜಗದೀಶಕುಮಾರ್, ಕಾರ್ಯದರ್ಶಿ ಎಸ್‌.ಶಿವಶಂಕರ್‌, ಖಜಾಂಚಿ ಜುಗಲ್‌ ಕಿಶೋರ್‌, ನಿರ್ದೇಶಕರಾದ ಅರವಿಂದ, ಪುಟ್ಟಸ್ವಾಮಿ, ಕೃಷ್ಣಪ್ಪ, ಪ್ರಸಾದ್‌, ಮುರಳೀಧರ್‌, ಸೈಯದ್‌ಅಜ್ಗರ್‌ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT