ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಕಾರದಿಂದ ಸಹಕಾರ ಸಂಘ ಮುನ್ನಡೆಗೆ’

Last Updated 24 ಸೆಪ್ಟೆಂಬರ್ 2019, 13:36 IST
ಅಕ್ಷರ ಗಾತ್ರ

ವೀರೇಗೌಡನ ದೊಡ್ಡಿ(ಮಾಗಡಿ): ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತದ ಸಭೆ ಮಂಗಳವಾರ ಕೆ.ಎಸ್‌.ಸಿದ್ದಲಿಂಗ ಪ್ರಸಾದ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಅಧ್ಯಕ್ಷರು ಮಾತನಾಡಿ, ಸದಸ್ಯರೆಲ್ಲರ ಸಹಕಾರದಿಂದ ಸಂಘವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲಾಗುತ್ತಿದೆ ಎಂದರು.

ಮುಖ್ಯಕಾರ್ಯನಿರ್ವಾಹಕ ವಿ.ಸಿ. ಜಯಣ್ಣ ಮಾತನಾಡಿ, ಸಂಘದಲ್ಲಿ 240 ಜನ ಸದಸ್ಯರಿದ್ದಾರೆ. 60 ಸದಸ್ಯರು ನಿತ್ಯ 800 ಲೀಟರ್‌ ಹಾಲು ಹಾಕುತ್ತಿದ್ದಾರೆ. ₹ 6 ಲಕ್ಷ ಆದಾಯ ಬಂದಿದೆ. ₹ 1.70 ಲಕ್ಷ ನಿವ್ವಳ ಲಾಭ ಬಂದಿದೆ. ₹ 80 ಸಾವಿರ ಬೋನಸ್‌ ನೀಡಲಾಗುತ್ತಿದೆ ಎಂದರು.

ಸಂಘದ ಕಟ್ಟಡದ ಮೇಲೆ ಸಭಾಂಗಣ ಕಟ್ಟಿಸಲಾಗುವುದು. ಸಂಘದ ವತಿಯಿಂದ ಗ್ರಾಮದಲ್ಲಿನ ಸರ್ವರಿಗೂ ಶುದ್ಧ ನೀರು ಸಂಗ್ರಹಿಸಿಟ್ಟುಕೊಳ್ಳಲು ಕ್ಯಾನ್‌ ವಿತರಿಸಲಾಗಿದೆ ಎಂದು ಹೇಳಿದರು.

ಮುಖಂಡ ವಿ.ಆರ್‌. ಪರಮಶಿವಮೂರ್ತಿ ಮಾತನಾಡಿ, ‘ಸಂಘದ ಬೆಳವಣಿಗೆ ನಮ್ಮ ಗ್ರಾಮದ ಬೆಳವಣಿಗೆಯಾಗಿದೆ. ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಎಂಬುದು ನಮ್ಮೆಲ್ಲರ ಧ್ಯೇಯವಾಕ್ಯವಾಗಿದೆ’ ಎಂದರು.

ಹಂಚಿಕುಪ್ಪೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ್‌ ಮಾತನಾಡಿ, ರೈತರು ಸಾಂಪ್ರದಾಯಿಕ ಕೃಷಿ ಪದ್ದತಿಯ ಜತೆಗೆ ಹೈನುಗಾರಿಕೆ, ರೇಷ್ಮೆ ಬೆಳೆದು ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.

ಸಂಘದ ಉಪಾಧ್ಯಕ್ಷ ವಿ.ಎಸ್‌. ಲಿಂಗಯ್ಯ, ನಿರ್ದೇಶಕರಾದ ಪಂಚಾಕ್ಷರಯ್ಯ, ಮಹದೇವಯ್ಯ, ವಿ.ಆರ್‌. ಗಿರೀಶ್‌, ವಿ.ಎನ್‌. ರುದ್ರೇಶ್‌, ವಿ.ಪಿ. ಉಮೇಶ್‌, ನರಸಿಂಹಮೂರ್ತಿ, ಕೆಂಚಪ್ಪ, ಮಹಮದ್‌ ಷಫಿ, ಡಿ.ಎನ್‌. ನೀಲಮ್ಮ, ಎಲ್‌.ಎಸ್‌. ಮಂಗಳಮ್ಮ, ಗಂಗಲಕ್ಷ್ಮಮ್ಮ ಗೋಪಾಲ್‌, ಮಹಾದೇವಸ್ವಾಮಿ, ಮುದ್ದವೀರಯ್ಯ, ಚಲುವರಂಗಯ್ಯ, ಸರೋಜಮ್ಮ, ಬಸವರಾಜಯ್ಯ, ವಿ.ಸಿ. ಬಸವರಾಜು ಮಾತನಾಡಿದರು.

ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT