ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯಾನಂದ ಮಾಜಿ ಶಿಷ್ಯೆಯಿಂದ ಡಿಜಿಪಿಗೆ ದೂರು

Last Updated 23 ಮಾರ್ಚ್ 2022, 15:47 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ತನಿಖೆಗೆ ಒತ್ತಾಯಿಸಿ ಅವರ ಮಾಜಿ ಶಿಷ್ಯೆಯೂ ಆಗಿರುವ ಜರ್ಮನಿ ಪ್ರಜೆ ಸಾರಾ ಲಾಂಡ್ರಿ ಎಂಬುವರು ಕರ್ನಾಟಕ ಡಿಜಿಪಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಬಿಡದಿ ಆಶ್ರಮದಲ್ಲಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದು, ಇದರ ತನಿಖೆ ನಡೆಸಬೇಕು ಎಂದು ಕೋರಿ ಸಾರಾ ಎರಡು ವರ್ಷದ ಹಿಂದೆ ರಾಮನಗರ ಹಾಗೂ ಬಿಡದಿ ಪೊಲೀಸರಿಗೆ ಇ–ಮೇಲ್‌ ಮೂಲಕ ದೂರು ನೀಡಿದ್ದರು. ‘ ಈ ಪ್ರಕರಣದಲ್ಲಿ ದೂರುದಾರರು ಯಾರು ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯ ಇದೆ. ಹಾಗಾದಲ್ಲಿ ಮಾತ್ರ ತನಿಖೆ ಮುಂದುವರಿಸಲು ಸಾಧ್ಯ. ಹೀಗಾಗಿ ಬಿಡದಿ ಇಲ್ಲವೇ ಭಾರತದ ಯಾವುದೇ ಠಾಣೆಗೆ ಬಂದು ತಾವು ದೂರು ನೀಡಿದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಮನಗರ ಪೊಲೀಸರು ಉತ್ತರ ನೀಡಿದ್ದರು.

ಎರಡು ವರ್ಷದ ಬಳಿಕ, ರಾಮನಗರ ಪೊಲೀಸರ ಹಿಂಬರಹವನ್ನು ಟ್ವೀಟ್‌ ಮಾಡಿರುವ ಸಾರಾ, ಈ ಬಗ್ಗೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಈಗಲಾದರೂ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT