ಚನ್ನಪಟ್ಟಣ: ಶಾಸಕ ಸಿ.ಪಿ.ಯೋಗೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಮತ್ತು ಕಾಂಗ್ರೆಸ್ ಮುಖಂಡ ಇಗ್ಗಲೂರು ಕುಮಾರ್ ಅವರು ಮೊಬೈಲ್ ಕರೆಯಲ್ಲಿ ಪರಸ್ಪರ ಬೈದಾಡಿಕೊಂಡಿದ್ದು, ಈ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇಗ್ಗಲೂರು ಕುಮಾರ್ ತಮ್ಮ ಸಂಬಂಧಿಕರೊಬ್ಬರ ಆರೋಗ್ಯ ಸಮಸ್ಯೆಗೆ ಶಾಸಕರ ಆಪ್ತ ಸಹಾಯಕರು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆ ವಿವರಣೆ ಪಡೆಯಲು ರಮೇಶ್, ಕುಮಾರ್ಗೆ ಕರೆ ಮಾಡಿ ಪ್ರಶ್ನಿಸಿದ್ದಾರೆ. ಆಗ ಕುಮಾರ್, ರಮೇಶ್ ವಿರುದ್ಧ ಹರಿಹಾಯ್ದಿದ್ದಾರೆ. ಇದರಿಂದ ಏಕಾಏಕಿ ರಮೇಶ್ ಕೂಡ ಗರಂ ಆಗಿದ್ದಾರೆ.

ಇಬ್ಬರ ನಡುವಿನ ಮೊಬೈಲ್ ಸಂಭಾಷಣೆ ವೇಳೆ ವಾಗ್ವಾದ ನಡೆದಿದೆ. ರಮೇಶ್ ಅವಾಚ್ಯ ಶಬ್ದಗಳಿಂದ ಇಗ್ಗಲೂರು ಕುಮಾರ್ ಅವರನ್ನು ನಿಂದಿಸಿದ್ದಾರೆ. ನಂತರ ಪರಸ್ಪರ ಬೈದಾಡಿಕೊಂಡ ಇಗ್ಗಲೂರು ಕುಮಾರ್, ಈ ವಿಚಾರವನ್ನು ಯೋಗೇಶ್ವರ್ಗೆ ಹೇಳುತ್ತೇನೆ. ‘ನೀನೊಬ್ಬ 420 ಎಂದು ಗರಂ ಆಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್, ನನ್ನ ಇನ್ನೊಂದು ಮುಖ ನೋಡಿಲ್ಲ ನೀನು’ ಎಂದು ಬೆದರಿಕೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.