‘ಅಂತರ್ಮುಖಿಯಾಗುತ್ತಿರುವ ಮಕ್ಕಳು’
‘ಇಂದು ಮೊಬೈಲ್ ಇಲ್ಲದ ಮನೆಯೇ ಇಲ್ಲವಾಗಿದೆ. ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿರುವ ಮಕ್ಕಳು ಅಂತರ್ಮುಖಿಗಳಾಗುತ್ತಿದ್ದಾರೆ. ತಂದೆ–ತಾಯಿ ಸೇರಿದಂತೆ ಕುಟುಂಬದ ಸದಸ್ಯರ ಜೊತೆ ಸರಿಯಾಗಿ ಮಾತು ಸಹ ಆಡುತ್ತಿಲ್ಲ. ಮೊಬೈಲ್ ಅವರ ಪ್ರಪಂಚವಾಗಿದ್ದು ಬೆಳಿಗ್ಗೆಯಿಂದ ಸಂಜೆವರೆಗೂ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವುದನ್ನು ನಿಲ್ಲಿಸಬೇಕು. ಮಕ್ಕಳು ಮೊಬೈಲ್‌ನಲ್ಲಿ ಏನನ್ನಾದರೂ ಒತ್ತಿದಾಗ ಅಲ್ಲಿರುವ ವೈಯಕ್ತಿಕ ದತ್ತಾಂಶವು ಬೇರೆಯವರಿಗೆ ಹೋಗಿ ದುರುಪಯೋಗ ಅಥವಾ ವಂಚನೆಯಾಗುವ ಸಾಧ್ಯತೆ ಇರುತ್ತದೆ’ ಎಂದು ಇಂದ್ರೇಶ್ ತಿಳಿಸಿದರು.