ಕನಕಪುರ: ಮುಂಗಾರು ಪ್ರಾರಂಭವಾಗಿದ್ದು ಕೃಷಿ ಇಲಾಖೆಯಿಂದ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಕನಕಪುರ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಾಧಾಕೃಷ್ಣ ತಿಳಿಸಿದ್ದಾರೆ.

ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಆಗಸ್ಟ್ 15ರವರೆಗೆ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದ್ದು, ಸೂಕ್ತ ದಾಖಲೆಗಳನ್ನು ತೋರಿಸಿ ರೈತರು ರಾಗಿ, ಭತ್ತ, ಮುಸಕಿನ ಜೋಖ, ತೊಗರಿ, ಅಲಸಂದೆ ಸೇರಿದಂತೆ ವಿವಿಧ ಬಿತ್ತನೆ ಬೀಜಗಳನ್ನು ಪಡೆಯಬಹುದು.

ಕೃಷಿ ಯಾಂತ್ರೀಕರಣ ಯೋಜನೆಯಡಿ ಪವರ್ ಟಿಲ್ಲರ್, ಪವರ್ ವೀಡರ್, ಬ್ರಷ್ ಕಟರ್, ಚಾಫ್ ಕಟರ್, ರಾಗಿ ಕಟಾವು ರೀಪರ್, ಒಕ್ಕಣೆಯಂತ್ರ ಮತ್ತು ಟ್ರಾಕ್ಟರ್ಗಳಿಗೆ ರೋಟವೇಟರ್, ಕಲ್ಟಿವೇಟರ್, ಡಿಸ್ಕ್ ನೇಗಿಲು, ರಾಗಿ ಬಿತ್ತನೆ ಕೂರಿಗೆ ಮುಂತಾದ ಉಪಕರಣಗಳನ್ನು ಶೇ.50 ರಷ್ಟು ಸಹಾಯಧನದಲ್ಲಿ ವಿತರಿಸಲಾಗುತ್ತದೆ. ಜೊತೆಗೆ ಸ್ಪಿಂಕ್ಲರ್ ಘಟಕವನ್ನು ಶೇ.90ರಷ್ಟು ರಿಯಾಯಿತಿಯಲ್ಲಿ ನೀಡಲಾಗುತ್ತಿದೆ.

ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ರಾಗಿ ಕ್ಲೀನಿಂಗ್ ಯಂತ್ರ, ರಾಗಿ ಫ್ಲೋರ್ ಮಿಲ್, ಪಲ್ವರೈಸರ್, ದಾಲ್ ಮೇಕಿಂಗ್ ಮಷಿನ್, ಸಣ್ಣ ಎಣ್ಣೆ ಗಾಣವನ್ನು ಶೇ. 50ರ ಸಹಾಯಧನದಲ್ಲಿ ನೀಡಲಾಗುತ್ತದೆ.

ಕೃಷಿಹೊಂಡಗಳಿಗೆ ಪಾಲಿಥಿನ್ ಹೊದಿಕೆ, ಡೀಸೆಲ್ ಪಂಪ್ಸೆಟ್, ತುಂತುರು ನೀರಾವರಿ ಘಟಕಗಳಿಗೆ ಶೇ 80ರಷ್ಟು ಸಹಾಯಧನ. ಹೊಂಡದ ಸುತ್ತ ತಂತಿ ಬೇಲಿ ನಿರ್ಮಾಣಕ್ಕೇ ಶೇ 40ರಷ್ಟು ಸಹಾಯಧನ ಸಿಗಲಿದೆ. ಆಸಕ್ತ ರೈತರು ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಇದರ ಉಪಯೋಗ ಪಡೆದುಕೊಳ್ಳಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.