ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ

Published : 30 ಸೆಪ್ಟೆಂಬರ್ 2024, 5:35 IST
Last Updated : 30 ಸೆಪ್ಟೆಂಬರ್ 2024, 5:35 IST
ಫಾಲೋ ಮಾಡಿ
Comments

ಮಾಗಡಿ: ‘ನಾವು ಪ್ರತಿ ದಿನ ಒತ್ತಡದಲ್ಲೇ ಕೆಲಸದಲ್ಲಿ ತೊಡಗಿಕೊಂಡಿರುತ್ತೇವೆ. ಒತ್ತಡದಿಂದ ಹೊರಬರುವ ನಿಟ್ಟಿನಲ್ಲಿ ವಾರಕ್ಕೆ ಒಮ್ಮೆಯಾದರೂ ಆಸಕ್ತ ಕ್ರೀಡೆಯಲ್ಲಿ ತೊಡಗಿಸಿಕೊಂಡು ಒತ್ತಡದಿಂದ ಹೊರಬರಬಹುದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಕೆ.ಧನಂಜಯ ಹೇಳಿದರು.

ಪಟ್ಟಣದ ಕಲ್ಯಾಗೇಟ್ ತಡವಾಳ್ ಮುಖ್ಯರಸ್ತೆಯಲ್ಲಿ ಗಜಪಡೆ ಯುವಕರ ಸೇನೆ ವತಿಯಿಂದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಯುವಕರು ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ತೋರಿಸುವ ಕೆಲಸ ಮಾಡಬೇಕು. ದಿನನಿತ್ಯದ ಕೆಲಸಗಳಲ್ಲೇ ತೊಡಗಿಕೊಂಡರೆ ಆಸಕ್ತಿ ಕಳೆದುಕೊಳ್ಳುತ್ತಾರೆ. ರಜಾ ದಿನಗಳಲ್ಲಿ ಆಯೋಜಿಸುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲೇ ಅಡಗಿರುವ ಪ್ರತಿಭೆ ತೋರಿಸುವ ಕೆಲಸ ಮಾಡಬೇಕು. ಯುವಕರಿಗೆ ಸರಿಯಾದ ಕ್ರೀಡಾ ತರಬೇತಿ ಸಿಕ್ಕರೆ ಉತ್ತಮ ಕ್ರೀಡಾಪಟುಗಳಾಗಿ ರೂಪಗೊಳ್ಳುತ್ತಾರೆ. ಕ್ರೀಡೆಯಲ್ಲಿ ಭಾಗವಹಿಸಬೇಕಾದರೆ ಆಸಕ್ತಿ ಅತಿಮುಖ್ಯ. ಜಿಲ್ಲೆಯಲ್ಲಿ ಕ್ರೀಡಾ ತರಬೇತಿ ಕೇಂದ್ರ ಹೆಚ್ಚು ಕ್ರೀಡಾಪಟುಗಳನ್ನು ಹೊರತರುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಪುರಸಭೆ ಮಾಜಿ ಸದಸ್ಯ ರೂಪೇಶ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯದಲ್ಲಿ ಹೆಚ್ಚು ಲಾಭ ಗಳಿಸಬಹುದು. ಕ್ರೀಡೆಯಲ್ಲಿ ಭಾಗವಹಿಸಿ ದೊಡ್ಡ ಸಾಧನೆ ಮಾಡಬಹುದು. ಗೆಲುವು–ಸೋಲು ಸಮಾನವಾಗಿ ಸ್ವೀಕರಿಸುವ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪುರಸಭಾ ಸದಸ್ಯ ರಾಮಣ್ಣ ಮಾತನಾಡಿ, ಪಟ್ಟಣದಲ್ಲಿ ಈ ಹಿಂದೆ ಸಾಕಷ್ಟು ಕ್ರೀಡೆ ಆಯೋಜಿಸಲಾಗುತ್ತಿತ್ತು. ಈಗ ಯುವಕರು ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದರು.

ಜಿಲ್ಲಾಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ವಿವಿಧ ತಂಡಗಳು ಪಾಲ್ಗೊಂಡಿದ್ದವು. ಪುರಸಭೆ ಸದಸ್ಯರಾದ ಪುರುಷೋತ್ತಮ್, ಹಳ್ಳಿಕಾರ್ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಹನುಮಂತರಾಜ್, ಕಾಂಗ್ರೆಸ್ ಮಹಿಳಾ ಸದಸ್ಯರಾದ ಶೈಲಜಾ, ಯುವ ಮುಖಂಡರಾದ ನರಸಿಂಹಮೂರ್ತಿ, ಆನಂದ್ ಸೇರಿದಂತೆ ಅನೇಕ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT