ಕನಕಪುರ: ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಆಡಳಿತ ಮಂಡಳಿಯ 5 ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 12 ಮಂದಿಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಗೆ ಫೆ. 8 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು. 12 ಕ್ಷೇತ್ರಗಳಿಗೆ 18 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಫೆ.9 ರಂದು ನಾಮಪತ್ರ ಪರಿಷ್ಕರಣೆಯಲ್ಲಿ ಎಲ್ಲ ನಾಮಪತ್ರಗಳು ಸಿಂಧುವಾಗಿದ್ದವು.

ಕನಕಪುರ ಟೌನ್ 2 ನೇ ಕ್ಷೇತ್ರದ 1 ಸ್ಥಾನಕ್ಕೆ 2 ನಾಮಪತ್ರ, ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ 6 ನಾಮಪತ್ರ, ಉಳಿದ 10 ಕ್ಷೇತ್ರಗಳಲ್ಲಿ 1 ಸ್ಥಾನಕ್ಕೆ 1 ನಾಮಪತ್ರ ಸಲ್ಲಿಕೆಯಾಗಿದ್ದವು.

ಫೆ.10 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಶಾಸಕ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ಮಾರ್ಗದರ್ಶನದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವು, ನಗರಸಭೆ ಮಾಜಿ ಅಧ್ಯಕ್ಷ ಕೆ.ಎನ್.ದಿಲೀಪ್ ಮಾತುಕತೆ ನಡೆಸಿದರು. ಅದು ಫಲಪ್ರದವಾಗಿ ಹೆಚ್ಚುವರಿ ನಾಮಪತ್ರಗಳನ್ನು ವಾಪಸ್ ಪಡೆದರು.

ಒಬ್ಬೊಬ್ಬರೇ ಅಭ್ಯರ್ಥಿ ಕಣದಲ್ಲಿ ಉಳಿದಿದ್ದರಿಂದ ಚುನಾವಣಾಧಿಕಾರಿ ವೈ.ವೆಂಕಟೇಶ್ 12 ಕ್ಷೇತ್ರದ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಿ ಪ್ರಕಟಿಸಿದರು.

ಅವಿರೋಧವಾಗಿ ಆಯ್ಕೆಯಾದವರು: ಕನಕಪುರ ಟೌನ್ 1ನೇ ಕ್ಷೇತ್ರದಿಂದ ಮಹಮ್ಮದ್ ಆಸೀಫ್ ಕನಕಪುರ, 2ನೇ ಕ್ಷೇತ್ರದಿಂದ ಜೆ.ನಟರಾಜು ಕನಕಪುರ, ಕಸಬಾ 1ನೇ ಕ್ಷೇತ್ರದಿಂದ ಜಯಮ್ಮ ಜವನಮ್ಮನದೊಡ್ಡಿ, 2ನೇ ಕ್ಷೇತ್ರದಿಂದ ಭದ್ರಗಿರಯ್ಯ ತಿಗಳರಹೊಸಳ್ಳಿ, ಹಾರೋಹಳ್ಳಿ 1ನೇ ಕ್ಷೇತ್ರದಿಂದ ಉಬೇದುಲ್ಲಾ ಷರೀಪ್ ಅರಟಬೆಲೆ.

ಮರಳವಾಡಿ 1ನೇ ಕ್ಷೇತ್ರ ಪಿ.ಸಿ.ಕೆಂಪೇಗೌಡ ಪುರದೊಡ್ಡಿ, ಕೋಡಿಹಳ್ಳಿ 1ನೇ ಕ್ಷೇತ್ರ ಎಚ್.ಎನ್.ರಮೇಶ್ ಹುಣಸನಹಳ್ಳಿ, ಉಯ್ಯಂಬಳ್ಳಿ 1ನೇ ಕ್ಷೇತ್ರದಿಂದ ಕೆಂಚಯ್ಯ ಕಡ್ಲೇದೊಡ್ಡಿ, 2ನೇ ಕ್ಷೇತ್ರದಿಂದ ಎಂ.ಎಸ್.ಕುಳ್ಳೀರೇಗೌಡ ಶೆಟ್ಟಿಕೆರೆದೊಡ್ಡಿ, ಸಾತನೂರು 1ನೇ ಕ್ಷೇತ್ರ ಪ್ರಶಾಂತ್.ಆರ್ ಹೊನ್ನಹಳ್ಳಿ, 2ನೇ ಕ್ಷೇತ್ರದಿಂದ ಕೆಂಪಮ್ಮ ಕಚ್ಚುವನಹಳ್ಳಿ, ಸಾಲಗಾರರಲ್ಲದ ಕ್ಷೇತ್ರದಿಂದ ಕೆ.ಜಿ.ಭೈರಪ್ಪಉರುಫ್ ನಾಗೇಶ್ ಕನಕಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.