ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ವಿದ್ಯುತ್‌ ಸುರಕ್ಷತಾ ಜಾಗೃತಿ ಜಾಥಾ

Published 21 ಡಿಸೆಂಬರ್ 2023, 5:11 IST
Last Updated 21 ಡಿಸೆಂಬರ್ 2023, 5:11 IST
ಅಕ್ಷರ ಗಾತ್ರ

ಕನಕಪುರ: ವಿದ್ಯುತ್‌ ಬಳಕೆಯಲ್ಲಿ ಸಾರ್ವಜನಿಕರು ಮತ್ತು ವಿದ್ಯುತ್‌ ಗ್ರಾಹಕರು ಜಾಗೃತಿ ವಹಿಸಬೇಕು ಎಂದು ಬೆಸ್ಕಾಂ ಇಇ ಎನ್‌.ಶಿವಕುಮಾರ್‌ ಮನವಿ ಮಾಡಿದರು.

ಇಲ್ಲಿನ ನಗರಸಭೆ ಮುಂಭಾಗ ಬೆಸ್ಕಾಂ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ವಿದ್ಯುತ್‌ ಸುರಕ್ಷತಾ ಜಾಗೃತಿ ಜಾಥಾ ಹಾಗೂ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯುತ್‌ ಸುರಕ್ಷತೆಗಾಗಿ ಇಲಾಖೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಹಾಗೂ ಜಾಗೃತಿ ನಿಯಮಗಳನ್ನು ಜಾರಿಮಾಡಿದೆ. ಸಾರ್ವಜನಿಕವಾಗಿ ಸಾಕಷ್ಟು ವಿದ್ಯುತ್‌ ಅವಘಡ, ಅಪಘಾತ ಸಂಭವಿಸುತ್ತಿವೆ. ಅವುಗಳನ್ನು ತಡೆಗಟ್ಟುವ ಉದ್ದೇಶದಿಂದಲೇ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದಾಗಿ ತಿಳಿಸಿದರು.

ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ವಿದ್ಯುತ್‌ ಬಳಕೆಯಲ್ಲಿ ಎಚ್ಚರವಹಿಸಬೇಕು. ಕಾನೂನು ಬಾಹಿರವಾಗಿ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆಯಬಾರದು. ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿದ್ದರೆ ಅದನ್ನು ಇಲಾಖೆ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದರು.

ಬೆಸ್ಕಾಂ ಇಲಾಖೆಯಿಂದ ಆಯೋಜಿಸಿದ್ದ ಬೀದಿನಾಟಕದ ತಂಡವು ಕನಕಪುರ ಚನ್ನಬಸಪ್ಪ ವೃತ್ತ ಮತ್ತು ಕೋಡಿಹಳ್ಳಿ ಶಾರದ ಶಾಲೆ ಆವರಣದಲ್ಲಿ ವಿದ್ಯುತ್‌ ಜಾಗೃತಿ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ಬೆಸ್ಕಾಂ ಇಲಾಖೆ ಅಧಿಕಾರಿಗಳು, ನೌಕರರು, ಸಿಬ್ಬಂದಿ ನಗರದಲ್ಲಿ ಜಾಗೃತಿ ಜಾಥದ ಮೆರವಣಿಗೆ ನಡೆಸಿ ವಿದ್ಯುತ್‌ ಸುರಕ್ಷತೆ ಘೋಷಣೆ ಕೂಗುತ್ತಾ ಜನರ ಗಮನ ಸೆಳೆದರು. ಬೆಸ್ಕಾಂ ಎಇಇ ಅನಿಲ್‌ಕುಮಾರ್‌, ರಂಗಸ್ವಾಮಿ, ಮಾದೇಶ್‌ ಸೇರಿದಂತೆ ಎಲ್ಲ ಎಇ, ಜೆಇ ಹಾಗೂ ನೌಕರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕನಕಪುರದ ಎಂ.ಜಿ.ರಸ್ತೆಯಲ್ಲಿ ಬೆಸ್ಕಾಂ ಇಲಾಖೆಯಿಂದ ವಿದ್ಯುತ್‌ ಸುರಕ್ಷತೆ ಬೀದಿ ನಾಟಕ ನಡೆಯಿತು
ಕನಕಪುರದ ಎಂ.ಜಿ.ರಸ್ತೆಯಲ್ಲಿ ಬೆಸ್ಕಾಂ ಇಲಾಖೆಯಿಂದ ವಿದ್ಯುತ್‌ ಸುರಕ್ಷತೆ ಬೀದಿ ನಾಟಕ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT