ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಮುಗ್ಗೂರು ಅರಣ್ಯ ಪ್ರದೇಶದ ಮರಳೀಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಸ್ಪರ್ಶದಿಂದ ಗಂಡಾನೆಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ.
ಬನ್ನಿಮುಕ್ಕೋಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮರಳೀಪುರ ಗ್ರಾಮದ ರುದ್ರೇಗೌಡ ಮತ್ತು ಮತ್ತಿತರರಿಗೆ ಸೇರಿದ ಜಮೀನಿನಲ್ಲಿ ಭತ್ತ ಮತ್ತು ರಾಗಿ ಫಸಲು ರಕ್ಷಣೆಗಾಗಿ ಜಮೀನಿನ ಸುತ್ತಲೂ ಬಿಟ್ಟಿದ್ದ ತಂತಿಯಿಂದ ವಿದ್ಯುತ್ ಪ್ರವಹಿಸಿ ಆನೆ ಮೃತಪಟ್ಟಿದೆ.
ಸುಮಾರು 25 ವರ್ಷದ ಗಂಡಾನೆ ಸಾವಿಗೀಡಾಗಿದ್ದು, ಶನಿವಾರ ಬೆಳಿಗ್ಗೆ ಜಮೀನಿನ ಕಡೆ ಹೋದವರು ಆನೆ ಸತ್ತಿರುವುದನ್ನು ನೋಡಿ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು, ವಲಯ ಅರಣ್ಯಾಧಿಕಾರಿ ವಿಜಯಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಟಿ. ಕೃಷ್ಣ, ಎಸ್‌ಐ ಅನಂತರಾಮ್ ಹಾಗೂ ಬೆಸ್ಕಾಂ ವಿಚಕ್ಷಣ ದಳದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.