ಬುಧವಾರ, ಏಪ್ರಿಲ್ 21, 2021
32 °C

ರಾಮನಗರ| ಜನರಿಂದ ಅನಿತಾ ಕುಮಾರಸ್ವಾಮಿಗೆ ಘೇರಾವ್, ಮುಖಂಡರೊಂದಿಗೆ ಕಿತ್ತಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ರಾಮನಗರ: ಇಲ್ಲಿನ ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ಸಭೆಯಲ್ಲಿ ಪಾಲ್ಗೊಂಡ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಜನರು ಘೇರಾವ್ ಹಾಕಿದ್ದು, ಜೆಡಿಎಸ್ ಮುಖಂಡರ ಜೊತೆ ಕಿತ್ತಾಟವನ್ನೂ ನಡೆಸಿದರು.

ವಿನಾಯಕ ನಗರದಲ್ಲಿ ಇರುವ ಗ್ಯಾಸ್ ಗೋಡೌನ್ ಖಾಲಿ ಮಾಡಿಸುವಂತೆ ಜನರು ಮನವಿ ಸಲ್ಲಿಸಿದ್ದು, ಅದಕ್ಕೆ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕಿ ಅನಿತಾಕುಮಾರಸ್ವಾಮಿ ಎದುರೆ ರಾಮನಗರದ ನಗರಸಭೆಯ ಆವರಣದಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಹಾಗೂ ಮುಖಂಡ ರಾಜು ಪರಸ್ಪರ ಕಿತ್ತಾಡಿಕೊಂಡರು.

ಗ್ಯಾಸ್ ಗೋಡನ್ ಅನ್ನು ಸ್ಥಳಾಂತರಿಸುವಂತೆ ರಾಜು ಅನಿತಾಕುಮಾರಸ್ವಾಮಿ ರವರಲ್ಲಿ ಮನವಿ ಮಾಡಿದರು. ಮನವಿಗೆ ಶಾಸಕರು ಸಕಾರಾತ್ಮವಾಗಿ ಸ್ಪಂದಿಸದ ಕಾರಣ ರಾಜು ಅವರು ಅನಿತಾ ಕಾಲಿಗೆ ಬಿದ್ದು, ಅವರ ಕಾರಿನ ಮುಂದೆ ಕುಳಿತು ಪ್ರತಿಭಟನೆಗೆ ಮುಂದಾದರು.

ಮಧ್ಯ ಪ್ರವೇಶಿಸಿದ ರಾಜಶೇಖರ್ ಸಮಸ್ಯೆಯನ್ನು ಶಾಸಕರು ಬಗೆ ಹರಿಸುತ್ತಾರೆ ಎಂದು ರಾಜುಗೆ ಹೇಳಿದ ಸಂದರ್ಭದಲ್ಲಿ ಇಬ್ಬರ ನಡುವೆ ಜಗಳ ಪ್ರಾರಂಭವಾಯಿತು. ಇದರಿಂದ ಬೇಸತ್ತ ಅನಿತಾ ಅಲ್ಲಿಂದ ನಿರ್ಗಮಿಸಿದರು. ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು