ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಡುವೆಯೂ ಸಂಭ್ರಮ

Last Updated 22 ಏಪ್ರಿಲ್ 2021, 6:51 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನಾದ್ಯಂತ ಶ್ರೀರಾಮನವಮಿ ಹಬ್ಬವನ್ನು ಸರಳವಾಗಿ ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಲಾಯಿತು. ಪಟ್ಟಣದ ಹೊಸಪೇಟೆ ರಸ್ತೆಯ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಅಂಗವಾಗಿ ವಿಶೇಷ ಪೂಜಾಧಿಗಳು ಮತ್ತು ಸತ್ಸಂಗ ನಡೆಯಿತು.

ಅರ್ಚಕ ವೆಂಕಟೇಶ್ ಶರ್ಮ ಮಾತನಾಡಿ, ‘ದೇವರು ಇದ್ದಾನೆ ಎಂದು ನಂಬಿದವರ ಮನದಲ್ಲಿ ದೇವರಿದ್ದಾನೆ. ಆತನನ್ನು ಕಾಣಲು ಅಚಲವಾದ ನಿಷ್ಠೆ, ಆತ್ಮಶುದ್ಧಿ, ಶ್ರದ್ಧೆ ಮತ್ತು ಭಕ್ತಿ ಇರಬೇಕು. ಶ್ರೀರಾಮಚಂದ್ರ ಭಾರತೀಯರ ಶ್ರದ್ಧಾಭಕ್ತಿಯ ಸಂಕೇತ. ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ತೆರಳಿದ ಆದರ್ಶ ಪುರುಷ’ ಎಂದರು.

ಆದಿಕವಿ ವಾಲ್ಮೀಕಿ ಮಹರ್ಷಿ ರಚಿಸಿರುವ ರಾಮಾಯಣ ಕಾವ್ಯದಲ್ಲಿನ ಆದರ್ಶಗಳನ್ನು ಓದುವುದು ನಮ್ಮೆಲ್ಲರ ಮುಕ್ತಿಗೆ ಸಾಧನವಾಗಲಿದೆ ಎಂದರು.

ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ ನಾರಾಯಣಪ್ಪ ಮಾತನಾಡಿ, ‘ಮನೆ ಮನೆಯಲ್ಲೂ ಶ್ರೀರಾಮ ಭಜನೆ ಮಾಡುವುದನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ’ ಎಂದು ಹೇಳಿದರು.

ಅರ್ಚಕರಾದ ಶ್ರೀಧರ್ ಶರ್ಮ, ಮಹೇಶ್ ದೀಕ್ಷಿತ್, ರವಿಕುಮಾರ್ ಶರ್ಮ ರಾಮಾಯಣದಲ್ಲಿನ ನೈತಿಕ ಮೌಲ್ಯಗಳ ಬಗ್ಗೆ ಮಾತನಾಡಿದರು.ಭಕ್ತಮಂಡಳಿಯ ಪರಶುರಾಮು, ಕುಮಾರ್ ಹಾಗೂ ಭಕ್ತರು ಇದ್ದರು. ನೀರು ಮಜ್ಜಿಗೆ, ಪಾನಕ, ಕೋಸಂಬರಿ, ಹಲಸಿನ ಹಣ್ಣಿನ ರಸಾಯನ ವಿತರಿಸಲಾಯಿತು.

ವಿಶೇಷ ಪೂಜೆ: ಪಟ್ಟಣದ ಕಲ್ಯಾಬಾಗಿಲು ಸಾರ್ವಜನಿಕ ವಿನಾಯಕಸ್ವಾಮಿ ದೇವಾಲಯದ ಆವರಣದಲ್ಲಿನ ಸೀತಾರಾಮಾಂಜನೇಯ ಸ್ವಾಮಿ ದೇವರಿಗೆ ಅಭಿಷೇಕ ಮಾಡಿ ಪೂಜಿಸಲಾಯಿತು.

ಶ್ರೀಗಿರಿಪುರದ ಆಂಜನೇಯಸ್ವಾಮಿ, ಸುಗ್ಗನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ಮತ್ತು ಆಂಜನೇಯ ಸ್ವಾಮಿ, ಕುದೂರಿನ ಕೋಟೆ ಆಂಜನೇಯಸ್ವಾಮಿ, ಬಾಣವಾಡಿ, ಕಣ್ಣೂರು, ತಿಪ್ಪಸಂದ್ರ, ಹೆಬ್ಬಳಲು, ನೇರಳೇಕೆರೆ, ದೊಡ್ಡಮುದುಗೆರೆ, ಅಗಲಕೋಟೆ, ಕಲ್ಲೂರು, ಮೋಟಗೊಂಡನಹಳ್ಳಿ, ಕೋರಮಂಗಲ, ಗುಡೇಮಾರನಹಳ್ಳಿ, ಸೋಲೂರು ಕೋಟೆ ಆಂಜನೇಯಸ್ವಾಮಿ, ಕಲ್ಯದ ಆಂಜನೇಯಸ್ವಾಮಿ, ಅಗಲಕೋಟೆ ಸೀತಾರಾಮ ಆಂಜನೇಯ ಸ್ವಾಮಿ, ಕೊಟ್ಟಗಾರಹಳ್ಳಿ ಆಂಜನೇಯಸ್ವಾಮಿ, ಸಾವನದುರ್ಗದ ಗುಂಡಾಂಜನೇಯ, ಉಕ್ಕಡ, ಕರಲಮಂಗಲ, ತಿರುಮಲೆ ಸಹ್ಯಾದ್ರಿ ಆಂಜನೇಯ, ಅಡ್ಡಗುಡ್ಡೆಯ ಮುತ್ತಾಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಪುರ ಗ್ರಾಮದ ಕೃಷ್ಣಮಠ, ಹೊಂಬಾಳಮ್ಮನ ಪೇಟೆ, ಪರಂಗಿಚಿಕ್ಕನಪಾಳ್ಯದ ಶ್ರೀರಾಮಮಂದಿರಗಳಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT