ಮಾಸಾಶನ ಪ್ರದರ್ಶನದ ಮೊತ್ತ ಹೆಚ್ಚಿಸಿ
ಸರ್ಕಾರ ಕಲಾವಿದರ ಮಾಶಾಸನವನ್ನು 60 ವರ್ಷದಿಂದ 45 ವರ್ಷಗಳಿಗೆ ಇಳಿಸಬೇಕು. ಕಲಾವಿದರಿಗೆ ಆರೋಗ್ಯ ವಿಮೆ ಜಾರಿಗೊಳಿಸಬೇಕು. ಕಲಾವಿದರ ಪರಿಹಾರ ನಿಧಿ ಸ್ಥಾಪಿಸಬೇಕು. ಕಲಾ ತಂಡದ ಪ್ರದರ್ಶನವೊಂದಕ್ಕೆ ನೀಡುತ್ತಿರುವ ₹20 ಸಾವಿರವನ್ನು ₹40 ಸಾವಿರಕ್ಕೆ ಹೆಚ್ಚಿಸಬೇಕು. ಹಾಡುಗಾರರ ತಂಡಕ್ಕೆ ₹15 ಸಾವಿರದಿಂದ ₹30 ಸಾವಿರಕ್ಕೆ ಹೆಚ್ಚಿಸಬೇಕು. ನಾಟಕ ತಂಡಗಳಿಗೆ ₹30 ಸಾವಿರದಿಂದ ₹50 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಾನಪದ ಕಲಾವಿದರೂ ಅಪಘಾತದಲ್ಲಿ ತೀರಿಕೊಂಡರೆ ₹5 ಲಕ್ಷ ಪರಿಹಾರ ಕೈ–ಕಾಲು ಕಳೆದುಕೊಂಡರೆ ₹2 ಲಕ್ಷ ಪರಿಹಾರ ಒದಗಿಸಬೇಕು. ಕಲಾವಿದರ ಹೆಣ್ಣು ಮಕ್ಕಳ ಮದುವೆಗೆ ₹1 ಲಕ್ಷ ನೆರವು ನೀಡಬೇಕು. ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಾಂಸ್ಕತಿಕ ಭವನವನ್ನು ನಿರ್ಮಿಸಬೇಕು. ಸದ್ಯ ಬಾಕಿ ಇರುವ ಕಲಾವಿದರ ಹಣವನ್ನು ತಿಂಗಳೊಳಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.