ಬುಧವಾರ, ಆಗಸ್ಟ್ 10, 2022
24 °C

ರಾಮನಗರ: ಭೂಮಿ ಅಗೆಯುತ್ತಿದ್ದ ವೇಳೆ 4 ಕಮಾನುಗಳ ಕಟ್ಟಡ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ನಗರದ ರೈಲು ನಿಲ್ದಾಣದ ರಸ್ತೆಯಲ್ಲಿ ಯುಕೋ ಬ್ಯಾಂಕ್ ಪಕ್ಕದ ಸ್ಥಳದಲ್ಲಿ ಕಾಮಗಾರಿ ವೇಳೆ ಸೋಮವಾರ ನೆಲ ಮಟ್ಟದಲ್ಲಿ ಕಟ್ಟಡದ ಅವಶೇಷಗಳು ಪತ್ತೆ ಆಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಬ್ಯಾಂಕ್ ಪಕ್ಕದ ನಿವೇಶನದಲ್ಲಿ ಹಿಂದೆ ಹೆಂಚಿನ ಮನೆಗಳನ್ನು ಕೆಡವಿ ಅಂಗಡಿ ಮಳಿಗೆ ನಿರ್ಮಿಸಲಾಗಿತ್ತು. ಈಗ ಅಂಗಡಿ ಮಳಿಗೆ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ಕೆ  ನಿವೇಶನದ ಮಾಲೀಕರು ಮುಂದಾಗಿದ್ದರು. ಇದಕ್ಕಾಗಿ ಜೆಸಿಬಿ ಯಂತ್ರದ ಸಹಾಯದಿಂದ ಪಿಲ್ಲರ್ ನಿರ್ಮಾಣಕ್ಕೆ ಭೂಮಿ ಅಗೆಯುತ್ತಿದ್ದ ವೇಳೆ ನೆಲಮಟ್ಟದಲ್ಲಿ ಗಟ್ಟಿಯಾದ ಗೋಡೆ ಸಿಕ್ಕಿದೆ. ಈ ವೇಳೆ ಗೋಡೆಯನ್ನು ಕೊರೆದು ನೋಡಿದಾಗ ಒಳ ಭಾಗದಲ್ಲಿ ನಾಲ್ಕು ಕಮಾನುಗಳ ಕಟ್ಟಡ ಕಾಣಿಸಿಕೊಂಡಿದೆ.

ಕಟ್ಟಡದ ಮಧ್ಯ ಭಾಗದಲ್ಲಿ ಈ ಕಮಾನುಗಳಿದ್ದು, ನಾಲ್ಕು ಭಾಗವೂ ಗೋಡೆಯಿಂದ ಆವೃತವಾಗಿದೆ. ಇದು ಶ್ರೀರಂಗಪಟ್ಟಣದಲ್ಲಿ ಇರುವ ಟಿಪ್ಪು ಕಾಲದ ಶಸ್ತ್ರಾಗಾರ ಮಾದರಿಯಲ್ಲಿ ಇದೆ. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಸ್ಥಳಕ್ಕೆ ಭೇಟಿ ನೀಡಿ ಕುತೂಹಲದಿಂದ ವೀಕ್ಷಿಸಿದರು. ಪೊಲೀಸರೂ ಸ್ಥಳ ಪರಿಶೀಲನೆ ನಡೆಸಿದರು.

ಕಟ್ಟಡ ಮಾಲೀಕ ನವಾಜ್ ಅಹಮ್ಮದ್ ಮಾತನಾಡಿ, ‘ ನಮ್ಮ ಬಳಿಯಿರುವ ನಿವೇಶನದ ಪತ್ರದ ಪ್ರಕಾರ 1932ರಲ್ಲಿ ಇಲ್ಲೊಂದು ವಾಟರ್ ಟ್ಯಾಂಕ್ ಇತ್ತು ಎಂದು ಉಲ್ಲೇಖವಾಗಿದೆ. 1965-67ರಲ್ಲಿ ಅಬ್ದುಲ್ ಅಜೀಂರವರು ಹರಾಜಿನಲ್ಲಿ ಪುರಸಭೆಯಿಂದ ಖರೀದಿಸಿದ್ದರು. ಅವರು ಜಾಗವನ್ನು ಬೇರೊಬ್ಬರಿಗೆ ಗಿಫ್ಟ್  ಮಾಡಿದ್ದರು. 2009ರಲ್ಲಿ ನಾವು ಖರೀದಿ ಮಾಡಿದೆವು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು