ಗಣೇಶನ ಹೆಸರಿಟ್ಟುಕೊಂಡಿರುವವರಿಗೆ ವಂಡರ್‌ಲಾಗೆ ಉಚಿತ ಪಾಸ್

ರಾಮನಗರ: ಗಣೇಶ ಚತುರ್ಥಿ ದಿನದ ಅಂಗವಾಗಿ ಬಿಡದಿಯ ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್ ವತಿಯಿಂದ ವಿಭಿನ್ನ ಕೊಡುಗೆ ನೀಡಿದೆ.
ಗಣೇಶನ 108 ಹೆಸರುಗಳ ಪೈಕಿ ಯಾವುದೇ ಹೆಸರು ನೀವು ಇಟ್ಟುಕೊಂಡಿದ್ದರೆ ಅಂತಹವರಿಗೆ ಇದೇ 10ರಂದು ವಂಡರ್‌ಲಾ ಪ್ರವೇಶಕ್ಕೆ ಉಚಿತ ಪಾಸ್ ಸಿಗಲಿದೆ.
ಮೊದಲು ಬರುವ 100 ಗ್ರಾಹಕರಿಗೆ ಈ ಪಾಸ್ ಲಭ್ಯವಿದೆ. ವಂಡರ್‌ಲಾಗೆ ನೇರವಾಗಿ ಭೇಟಿ ನೀಡಿ ಪಾಸ್ ಪಡೆಯಬಹುದು. ಅಂತಹವರು ತಮ್ಮ ಹೆಸರಿನ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ.
ಹೆಚ್ಚಿನ ವಿವರಗಳಿಗೆ ದೂರವಾಣಿ 080-372 30333, 080-35073966 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.