ಮಂಗಳವಾರ, ಏಪ್ರಿಲ್ 7, 2020
19 °C

ಜೆಸಿಬಿ ವಾಹನ ಡಿಕ್ಕಿ: ಯುವತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಮಾಗಡಿ ತಾಲ್ಲೂಕಿನ ಗವಿ ನಾಗಮಂಗಲ ಗೇಟ್ ಬಳಿ ಮಂಗಳವಾರ ಬೆಳಗ್ಗೆ ಜೆಸಿಬಿ ವಾಹನ ಡಿಕ್ಕಿಯಾಗಿ ಬಿ.ಕಾಂ.‌ ವಿದ್ಯಾರ್ಥಿನಿ ಚೈತ್ರಾ (20) ಸ್ಥಳದಲ್ಲೇ ಮೃತಪಟ್ಟರು.
 
ನಂಜಯ್ಯನಪಾಳ್ಯ‌ ನಿವಾಸಿಯಾದ ಚೈತ್ರಾ ಕರಲಮಂಗಲ ಗ್ರಾಮದಲ್ಲಿ ಇರುವ ಡೇರಿಗೆ ಸ್ಕೂಟರಿನಲ್ಲಿ ಹಾಲು ಕೊಂಡೊಯ್ದಿದ್ದರು. ಹಾಲು ಹಾಕಿ ಮನೆಗೆ ವಾಪಸ್ ಆಗುವ ವೇಳೆ ರಾಮನಗರ- ಮಾಗಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿತು. ಮಾಗಡಿ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು