ಶಾಲೆಯ ಗೋಡೆಯು ಬಿರುಕು ಬಿಟ್ಟಿರುವುದು
ಚಾವಣಿಯ ಹಂಚು ಬೀಳುವ ಸ್ಥಿತಿಯಲ್ಲಿವೆ
ಶಾಲೆಯಲ್ಲಿ ಕಲಿಕೆಯಲ್ಲಿ ನಿರತ ವಿದ್ಯಾರ್ಥಿಗಳು

ಶಾಲೆಯ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಆದರೆ ಇಲ್ಲಿಯವರೆಗೂ ಅವರು ಕಾಳಜಿವಹಿಸಿಲ್ಲ. ಶಾಲೆಯಲ್ಲಿ ಉತ್ತಮ ಶಿಕ್ಷಕರು ಇದ್ದಾರೆ ಮಕ್ಕಳು ಇದ್ದಾರೆ. ಆದರೆ ಒಳ್ಳೆಯ ಕಟ್ಟಡವಿಲ್ಲ
-ಶಿವರಾಜು ಎಸ್‌ಡಿಎಂಸಿ ಸದಸ್ಯಶೀಘ್ರ ಕಟ್ಟಡ ನಿರ್ಮಾಣ
‘ನಾನು ಓದಿದ್ದು ಇದೇ ಸರ್ಕಾರಿ ಶಾಲೆಯಲ್ಲಿ. ಈ ಶಾಲೆಯನ್ನು ಅಭಿವೃದ್ಧಿಪಡಿಸಬೇಕು ಹೊಸ ಕಟ್ಟಡ ಗ್ರಾಮದಲ್ಲಿ ಪಡಿತರ ವಿತರಣೆ ಅಂಗನವಾಡಿ ಗ್ರಾಮಕ್ಕೆ ಸೇತುವೆ ಮಾಡಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಅದಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೇನೆ. ಶಾಲಾ ಕಟ್ಟಡ ಬಿಟ್ಟು ಸೇತುವೆ ಅಂಗನವಾಡಿ ಪಡಿತರ ವಿತರಣೆ ಕೆಲಸಗಳು ಆಗಿವೆ. ಶೀಘ್ರ ಶಾಲಾ ಕಟ್ಟಡ ಮಾಡಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್.ಲೋಹಿತ್ ತಿಳಿಸಿದರು.