ಗುರುವಾರ , ಮಾರ್ಚ್ 23, 2023
31 °C

ವೃದ್ಧಾಶ್ರಮಕ್ಕೆ ದಿನಸಿ ಕಿಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ವೃದ್ಧರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಯಬೇಕು’ ಎಂದು ಬೆಂಗಳೂರಿನ ಪ್ರಭಾವತಿ ಫೌಂಡೇಷನ್ ಅಧ್ಯಕ್ಷೆ ಕೆ.ಆರ್. ಪ್ರಭಾವತಿ ಸಲಹೆ ನೀಡಿದರು.

ತಾಲ್ಲೂಕಿನ ದೇವರಹಳ್ಳಿಯ ಶ್ರೀಶಿರಡಿ ಸಾಯಿಬಾಬಾ ವೃದ್ಧಾಶ್ರಮಕ್ಕೆ ಫೌಂಡೇಷನ್ ವತಿಯಿಂದ ದಿನಸಿ ಕಿಟ್ ವಿತರಣೆ ಮಾಡಿ ಮಾತನಾಡಿ, ಇಂದು ವೃದ್ಧರನ್ನು ಅಗೌರವದಿಂದ ಕಾಣುವ ಮನೋಭಾವ ಹೆಚ್ಚಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ವೃದ್ಧಾಶ್ರಮದಲ್ಲಿರುವ ವೃದ್ಧರನ್ನು ದೇವರಂತೆ ಕಾಣಬೇಕು. ಅವರ ಜೀವನಕ್ಕೆ ನಮ್ಮ ಕೈಲಾದ ಸಹಾಯ ಸಹಕಾರ ಮಾಡಿದಾಗ ಮಾತ್ರ ದೇವರು ಮೆಚ್ಚುತ್ತಾನೆ. ಫೌಂಡೇಷನ್ ವತಿಯಿಂದ ರಾಜ್ಯದಲ್ಲಿರುವ ಎಲ್ಲಾ ವೃದ್ಧಾಶ್ರಮಗಳಿಗೆ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇತರೆ ಅವಶ್ಯಕ ಸೌಲಭ್ಯವನ್ನು ಫೌಂಡೇಷನ್ ವತಿಯಿಂದ ನೀಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಫೌಂಡೇಷನ್ ಕಾರ್ಯದರ್ಶಿ ಡಾ.ಎಂ.ಎಸ್. ಮಹೇಶ್ ಚಕ್ಕಲೂರು ಮಾತನಾಡಿದರು.

ಫೌಂಡೇಷನ್ ಪದಾಧಿಕಾರಿಗಳಾದ ಶಶಿಕಲಾ, ವಿನಯ್ ಕುಮಾರ್, ಮಂಜು, ಆಶ್ರಮದ ಸಂಸ್ಥಾಪಕ ಹರೀಶ್ ಹೆಗ್ಗಡೆ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.