ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ವತಿಯಿಂದಲೇ ಸ್ಯಾನಿಟೈಸರ್‌ ಉತ್ಪಾದನೆ!

220 ಲೀಟರ್ ಉತ್ಪನ್ನ ತಯಾರು: ಸರ್ಕಾರಿ ಕಚೇರಿಗಳಲ್ಲಿ ಬಳಕೆ
Last Updated 24 ಮಾರ್ಚ್ 2020, 17:16 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ವೈರಸ್‌ ತಡೆಗೆ ಅತ್ಯಗತ್ಯವಾದ ಸ್ಯಾನಿಟೈಸರ್‌ ಅನ್ನು ತಾನೇ ಉತ್ಪಾದಿಸುವ ಮೂಲಕ ಇಲ್ಲಿನ ಜಿಲ್ಲಾ ಪಂಚಾಯಿತಿಯು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.

ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಪ್ರಯೋಗಾಲಯದ ಸಿಬ್ಬಂದಿ ಈ ಹ್ಯಾಂಡ್ ಸ್ಯಾನಿಟೈಸರ್‌ ಅನ್ನು ಸಿದ್ಧಪಡಿಸಿದ್ದಾರೆ. ಈಗಾಗಲೇ 220 ಲೀಟರ್‌ನಷ್ಟು ಉತ್ಪನ್ನ ಸಿದ್ಧವಾಗಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿಯೇ ತಯಾರಿಸಲಾಗಿದೆ.ಬೇಡಿಕೆ ಹೆಚ್ಚಾದ ಕಾರಣ ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್‌ಗಳು ಬಲು ದುಬಾರಿ ಆಗುತ್ತಿವೆ. ಇಂತಹ ಹೊತ್ತಿನಲ್ಲಿ ಸರ್ಕಾರಿ ಸಂಸ್ಥೆಯೊಂದು ಇದರ ಉತ್ಪಾದನೆಯೂ ಮುಂದಾಗಿರುವುದು ಆಶಾದಾಯಕ ಬೆಳವಣಿಗೆ. ಇದನ್ನು ಸದ್ಯ ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳು, ಕಚೇರಿಗಳಲ್ಲಿ ಬಳಸಲು ಯೋಜಿಸಲಾಗಿದೆ.

‘ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಾರ್ಗಸೂಚಿಯಂತೆಯೇ ಇದನ್ನು ತಯಾರಿಸಲಾಗಿದ್ದು, ಸಂಪೂರ್ಣ ಸುರಕ್ಷಿತವಾಗಿದೆ. ಪ್ರಥಮ ಬಾರಿಗೆ ಇದನ್ನು ಬಳಕೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಹೇಳುತ್ತಾರೆ.

ಏನಿದರ ಫಾರ್ಮುಲಾ: ಐಸೋಪ್ರೊಫೈಲ್‌ ಆಲ್ಕೋಹಾಲ್, ಹೈಡ್ರೋಜನ್ ಪೆರಾಕ್ಸೈಡ್, ಗ್ಲೆಸೆರಾಲ್ ಮತ್ತು ಸ್ಟೆರೈಲ್ ಡಿಸ್ಟಿಲ್ ವಾಟರ್ ಬಳಸಿಕೊಂಡು ಈ ರಾಸಾಯನಿಕವನ್ನು ಸಿದ್ಧಪಡಿಸಲಾಗಿದೆ. ಪ್ರತಿ ಲೀಟರ್ ಸ್ಯಾನಿಟೈಸರ್‌ ಉತ್ಪಾದನೆಗೆ ₨700–800 ವೆಚ್ಚ ತಗುಲಿದೆ. ಬೇಡಿಕೆ ಆಧರಿಸಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನ ಮಾಡಲು ಚಿಂತಿಸಲಾಗಿದೆ. ಮುಂದೆ ಗ್ರಾಮ ಪಂಚಾಯಿತಿಗಳಲ್ಲಿಯೂ ಇದರ ಬಳಕೆಗೆ ನಿರ್ಧರಿಸಲಾಗಿದೆ.

ಪ್ರಯೋಗಾಲಯದ ಸಿಬ್ಬಂದಿ ವೆಂಕಟೇಶ್, ಭಾನುಪ್ರಕಾಶ್, ಪ್ರಯೋಗಾಲಯ ಸಹಾಯಕರಾದ ಧನುಷ್, ಅಂಜನ್ ಮೊದಲಾದವರು ಈ ಸ್ಯಾನಿಸೈಸರ್ ಉತ್ಪಾದನೆಯಲ್ಲಿ ಶ್ರಮಿಸಿದ್ದಾರೆ.

***
ನಮ್ಮ ಪ್ರಯೋಗಾಲಯದಲ್ಲಿಯೇ ಈ ಸ್ಯಾನಿಟೈಸರ್‌ ಉತ್ಪಾದನೆ ಆಗಿದ್ದು, ಜಿಲ್ಲೆಯ ಆಸ್ಪತ್ರೆ, ಸರ್ಕಾರಿ ಕಚೇರಿಗಳಲ್ಲಿ ಬಳಕೆ ಆಗಲಿದೆ
ಇಕ್ರಂ, ಜಿ.ಪಂ. ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT