ಕವಿ ಸಿದ್ಧಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮೂವರು ನಾಯಕರ ಸಮಾಗಮ
ಒಂದೇ ವೇದಿಕೆಯಲ್ಲಿ ಎಚ್‌ಡಿಕೆ, ಡಿಕೆ ಸುರೇಶ್, ಸಿಪಿ ಯೋಗೇಶ್ವರ್

ರಾಮನಗರ: ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಕವಿ ಸಿದ್ಧಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮೂವರು ರಾಜಕೀಯ ವೈರಿಗಳು ಅಕ್ಕಪಕ್ಕ ಕುಳಿತು ಗಮನ ಸೆಳೆದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್ ಹಾಗು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೀಗೆ ಒಟ್ಟಾಗಿ ಕುಳಿತಿದ್ದನ್ನು ಕಂಡು ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರೂ ಆಶ್ಚರ್ಯಗೊಂಡರು. ಆದರೆ ಈ ಮೂವರು ಒಬ್ಬರಿಗೊಬ್ಬರು ಹೆಚ್ಚೇನು ಮಾತನಾಡಲಿಲ್ಲ.
ಜಿಲ್ಲೆಯ ಕಾರ್ಯಕ್ರಮಗಳಲ್ಲಿ ಈ ಮೂವರು ಒಟ್ಟಿಗೆ ಪಾಲ್ಗೊಂಡಿದ್ದು ಅಪರೂಪ.
ರಮೇಶ ಜಾರಕಿಹೊಳಿ ಕುರಿತು ಆನಂದ್ ಸಿಂಗ್ ಅಳಿಯನ ಪೋಸ್ಟ್: ವಾಲ್ಮೀಕಿ ಸಮಾಜ ಆಕ್ರೋಶ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.