ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ | ಪೂರ್ಣಗೊಳ್ಳದ ವಸತಿ ಯೋಜನೆ: ಚಿರತೆ, ಕರಡಿಗಳ ತಂಗುದಾಣ

Published 21 ಡಿಸೆಂಬರ್ 2023, 8:11 IST
Last Updated 21 ಡಿಸೆಂಬರ್ 2023, 8:11 IST
ಅಕ್ಷರ ಗಾತ್ರ

ಮಾಗಡಿ: ತಿರುಮಲೆ ನರಸಿಂಹದೇವರ ಗುಡ್ಡದ ಹಿಂದೆ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸುತ್ತಿರುವ ಗುಂಪು ಮನೆಗಳ ಕಾಮಗಾರಿ  ನಾಲ್ಕೂವರೆ ವರ್ಷವಾದರೂ ಮುಗಿಯುತ್ತಿಲ್ಲ.

ವಸತಿ ರಹಿತ ಬಡವರಿಗೆ ಹಂಚುವ ಉದ್ದೇಶದಿಂದ ₹27ಕೋಟಿ ವೆಚ್ಚದಲ್ಲಿ 504 ಮನೆಗಳ ನಿರ್ಮಾಣ ಆರಂಭಿಸಲಾಗಿತ್ತು.  ಫಲಾನುಭವಿಗಳ ಪಟ್ಟಿಯನ್ನೂ ತಯಾರಿಸಲಾಗಿತ್ತು. ಆದರೆ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಮನೆಗಳ ಕಾಮಗಾರಿ ನನೆಗುದಿಗೆ ಬಿದ್ದಿದೆ. 

ಅರ್ಧಕ್ಕೆ ಕಟ್ಟಿ ಬಿಟ್ಟಿರುವ ಮನೆಗಳು ಭೂತ ಬಂಗಲೆಯಂತಾಗಿವೆ. ಗುಡ್ಡದ ಪಕ್ಕ ಇರುವುದರಿಂದ ಚಿರತೆ, ಕರಡಿ ಪಾಳು ಬಿದ್ದಿರುವ ಮನೆಗಳಲ್ಲಿ ಸೇರಿಕೊಳ್ಳುತ್ತಿವೆ. ಮನೆಗಳ ಗುಣಮಟ್ಟ ಕಳಪೆ ಎಂಬ ಕಾರಣದಿಂದ ಅವನ್ನು ಪಡೆಯಲು ಫಲಾನುಭವಿಗಳು ಕೂಡ ನಿರಾಕರಿಸುತ್ತಿದ್ದಾರೆ.  

ಕಟ್ಟಡಗಳ ಗುಣಮಟ್ಟ ತೀರಾ ಕಳಪೆಯಾಗಿದೆ. ಕಿಟಕಿ, ಬಾಗಿಲು ಇಟ್ಟಿಲ್ಲ. ಕಟ್ಟಡಕ್ಕೆ ಗುಣಮಟ್ಟದ ಪರಿಕರ ಬಳಸಿಲ್ಲ. ಮನೆಗಳ ಛಾವಣಿಯ ಸಿಮೆಂಟ್‌ ಕಳಚಿ ಬಿದ್ದಿದೆ. ಫಲಾನುಭವಿಗಳಿಂದ ಹೆಚ್ಚುವರಿಯಾಗಿ ಹಣ ಸಂಗ್ರಹಿಸಲಾಗಿದೆ ಎಂಬುವುದು ತಟವಾಳ್ ರಸ್ತೆ, ಹೊಸಪೇಟೆ ದಲಿತ ಕಾಲೊನಿ ನಿವಾಸಿಗಳ ಆರೋಪ.

ರಾಜೀವಗಾಂಧಿ ನಗರದ 52 ಮನೆ, ಕಾಳಿಯಪ್ಪ ಬಡಾವಣೆಯಲ್ಲಿ 20 ವರ್ಷಗಳ ಹಿಂದೆ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿಸಿದ್ದ ಮನೆಗಳಿಗೆ ಇಂದಿಗೂ ದಾಖಲೆ ನೀಡಿಲ್ಲ. ಫಲಾನುಭವಿಗಳ ಹೆಸರಿಗೆ ಖಾತೆ ಕೂಡ ನೀಡಿಲ್ಲ. ಅಲ್ಲಿನ ಬಡಾವಣೆಯಲ್ಲಿ ನಿರ್ಮಿಸಿರುವ ಎರಡು ಸಾರ್ವಜನಿಕ ಶೌಚಾಲಯಗಳು ಇಂದಿಗೂ ಪೂರ್ಣಗೊಂಡಿಲ್ಲ.

504 ಮನೆಗಳ ಪೈಕಿ 68 ಮನೆಗಳನ್ನು ಪೌರಕಾರ್ಮಿಕರಿಗೆ ವಿತರಿಸಲು ಹಿಂದಿನ ಶಾಸಕ ಎ.ಮಂಜುನಾಥ ಅವರು ತೀರ್ಮಾನಿಸಿ ಫಲಾನುಭವಿಗಳ ಪಟ್ಟಿ ತಯಾರಿಸಿದ್ದರು. ಅರ್ಧಕ್ಕೆ ನಿಂತಿರುವ ಗುಂಪು ಮನೆಗಳ ಕಾಮಗಾರಿ ಪೂರ್ಣಗೊಳಿಸಿ ವಸತಿ ರಹಿತರಿಗೆ ನೀಡಲು ಶಾಸಕ ಎಚ್‌.ಸಿ. ಬಾಲಕೃಷ್ಣ ಮುಂದಾಗಲಿ ಎನ್ನುವುದು ಫಲಾನುಭವಿಗಳ ಆಶಯ.  

ಗುತ್ತಿಗೆದಾರರರಿಗೆ ಸಂಪೂರ್ಣ ಹಣ ಪಾವತಿಯಾಗಿದೆ. ಎಇಇ ಮತ್ತು ಗುತ್ತಿಗೆದಾರರು ಈ ಬಗ್ಗೆ ಪ್ರತಿಕ್ರಿಯಿಸಬೇಕು
ಸುಬ್ರಮಣ್ಯ, ಕಾರ್ಯಪಾಲಕ ಎಂಜಿನಿಯರ್‌, ಕೊಳಚೆ ನಿರ್ಮೂಲನಾ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT