ರಾಮನಗರ: ‘ಮಾನವ ಕಳ್ಳ ಸಾಗಾಣಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಪಿಡುಗಾಗಿದೆ. ಅದನ್ನು ಹೋಗಲಾಡಿಸುವುದು ನಾಗರಿಕ ಸಮಾಜದ ಜವಾಬ್ದಾರಿ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಜಿಲ್ಲಾ ವಕೀಲರ ಸಂಘ, ಮುಕ್ತಿ ಒಕ್ಕೂಟ ಕರ್ನಾಟಕ, ಶಾಂತ ಜೀವಜ್ಯೋತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪಿಡುಗಿನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಮಾನವ ಕಳ್ಳ ಸಾಗಾಣಿಕ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಪಿಡುಗು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಜಾಗತಿಕವಾಗಿ ಸಮಾಜವನ್ನು ಪೀಡಿಸಿರುವ ಸಂಕೀರ್ಣ ಸಮಸ್ಯೆ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳು ದೇಶದ ಆಸ್ತಿ. ಮುಂದಿನ ಪ್ರಜೆಗಳಾಗುವಂತಹ ಮಕ್ಕಳನ್ನು ದುಶ್ಚಟಗಳಿಂದ ದೂರವಿರಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು. ಆದ್ದರಿಂದ ಮಕ್ಕಳ ಮೇಲಾಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು. ಮಕ್ಕಳು ದುಶ್ಚಟಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಮಾನವ ಕಳ್ಳ ಸಾಗಾಣಿಕೆಯಲ್ಲಿ ಮಾಲೀಕರು, ಸಾಗಾಣಿಕೆದಾರರು, ಅಪರಾಧಿ ಜಾಲಗಳು, ಮಕ್ಕಳು ಮತ್ತು ಮಹಿಳೆಯರನ್ನು ಮನೆಗೆಲಸ, ಸುಳ್ಳು ಮದುವೆ, ಸುಳ್ಳು ಉದ್ಯೋಗ, ಸುಳ್ಳು ದತ್ತುಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳು ಲೈಂಗಿಕವಾಗಿ ಹಾಗೂ ಆರ್ಥಿಕವಾಗಿ ಶೋಚನೀಯ ಪರಿಸ್ಥಿತಿಗೆ ಮಕ್ಕಳು ಮತ್ತು ಮಹಿಳೆಯರನ್ನು ಬಲತ್ಕಾರದಿಂದ ತಳ್ಳಲಾಗುತ್ತಿದೆ’ ಎಂದರು.

‘ಮಾನವ ಕಳ್ಳ ಸಾಗಾಣಿಕ ಉದ್ದೇಶ ಜೀತ ಕಾರ್ಮಿಕತೆ, ಜೀತ ಪದ್ದತಿ, ಕೃಷಿ ಪದ್ದತಿ, ಕಾರ್ಖಾನೆಯ ಕೆಲಸಕ್ಕಾಗಿ, ಅಂಗಾಂಗಗಳ ಮಾರಾಟ ಮತ್ತು ಜೋಡಣೆ, ಭಿಕ್ಷಾಟನೆ, ವೇಶ್ಯಾವೃತ್ತಿ ಹಾಗೂ ಆಶ್ಲೀಲ ಚಿತ್ರಗಳಿಗಾಗಿ ಮಕ್ಕಳ ಮಾರಾಟ, ಮಾದಕವಸ್ತುಗಳ ಕಳ್ಳ ಸಾಗಣಿಕೆ ಅಪರಾಧಗಳನ್ನು ಮಾಡುತ್ತಾರೆ. ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ತಕ್ಷಣ ಪೊಲೀಸರ ಗಮನಕ್ಕೆ ತರಬೇಕು’ ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಅನ್ಮೋಲ್ ಜೈನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಜಿಲ್ಲಾ ಕಾರ್ಮಿಕಾಧಿಕಾರಿ ನಾಗೇಂದ್ರ ಹಾಗೂ ಇತರರು ಇದ್ದರು.

ಲೈಂಗಿಕ ಶೋಷಣೆ ಭಿಕ್ಷಾಟನೆ ಜೀತ ಬಾಲ ಕಾರ್ಮಿಕತೆ ಅಂಗಾಂಗ ಮಾರಾಟ ಮತ್ತು ಬಾಲ್ಯವಿವಾಹಕ್ಕಾಗಿ ಮಾನವ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಈ ಪಿಡುಗಿಗೆ ಬಡತನ ಆರ್ಥಿಕ ಸಮಸ್ಯೆ ನಿರುದ್ಯೋಗ ಶಿಕ್ಷಣದ ಕೊರತೆ ಕಾರಣ

ಕ್ರಿಸ್ಟೋಪರ್ ಸ್ಟ್ಯಾನ್ಲಿ ವಕೀಲ

‘ಆಧುನಿಕ ಗುಲಾಮಗಿರಿಗೆ ಎಡೆ’

‘ಮಾನವ ಕಳ್ಳ ಸಾಗಾಣಿಕೆಯು ಆಧುನಿಕ ಸಮಾಜದ ಗುಲಾಮಗಿರಿಗೆ ಎಡೆ ಮಾಡಿಕೊಟ್ಟಿದೆ. ಬಲವಂತದ ದುಡಿಮೆ ಲೈಂಗಿಕ ಗುಲಾಮಗಿರಿ ವಾಣಿಜ್ಯ ಅಥವಾ ಲೈಂಗಿಕ ಶೋಷಣೆ ಉದ್ದೇಶಕ್ಕಾಗಿ ಮನುಷ್ಯರನ್ನು ವ್ಯಾಪಾರದ ಸರಕನ್ನಾಗಿಸಿಕೊಂಡು ಕಳ್ಳ ಸಾಗಾಣಿಕೆ ಮಾಡುವುದಾಗಿದೆ. ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿ ಕಾನೂನುಬಾಹಿರ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಮನುಷ್ಯನನ್ನು ಮನುಷ್ಯನಾಗಿ ಕಾಣದೆ ಮಾರಾಟ ವಸ್ತುವಾಗಿ ಕಾಣಲಾಗುತ್ತಿದೆ. ಜಗತ್ತಿನಲ್ಲಿ ಇಂದು ಮನುಷ್ಯರ ಅಂಗಾಂಗಗಳನ್ನು ಮಾರಾಟ ಮಾಡಲಾಗುತ್ತಿದೆ. ಮಕ್ಕಳು ಸಹ ಪಿಡುಗಿಗೆ ಹೆಚ್ಚು ಬಲಿಪಶುವಾಗುತ್ತಿದ್ದಾರೆ. ಮಕ್ಕಳನ್ನು ಅಪಹರಿಸಿ ಅಪರಾಧ ಚಟುವಟಿಕೆಯಲ್ಲಿ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಸಲಾಗುತ್ತಿದೆ’ ಎಂದು ಬಿ.ವಿ. ರೇಣುಕಾ ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.