ಮಾಗಡಿ: ರೈತರ ಇಚ್ಛಾಶಕ್ತಿಯಿಂದ ಭಾರತ ಸಮೃದ್ಧಿಯಾಗಿದೆಯೇ ಹೊರತು ರಾಜಕಾರಣಿಗಳಿಂದ ಅಲ್ಲ ಎಂದು ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬರಗಾಲ ಎದುರಾದರೂ ಜನರಿಗೆ ನಾಲ್ಕು ವರ್ಷಕ್ಕೆ ಸಾಕಾಗುವಷ್ಟು ಆಹಾರಧಾನ್ಯಗಳನ್ನು ಮಠದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ. ಇದು ರೈತರು ಬೆಳೆದ ಬೆಳೆಯಿಂದ ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಇಲ್ಲಿಯ ಬಿಜಿಎಸ್ ಕಾಲೇಜು ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 11ನೇ ವರ್ಷದ ರೈತ ದಿನಾಚರಣೆ ಹಾಗೂ ರೈತ ದೇವರುಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರೈತರು ಆಧುನಿಕ ಪದ್ಧತಿ ಮೂಲಕ ಇಡೀ ದೇಶಕ್ಕೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ರೈತರನ್ನು ದೇವರು ಎನ್ನುತ್ತೇವೆ. ಕುವೆಂಪು ಅವರು ನೇಗಿಲಯೋಗಿ ಎಂದು ಕರೆದರು. ರೈತರ ಪರ ಜೀವ ತೇಯ್ದ ಪ್ರೊ.ನಂಜುಂಡಸ್ವಾಮಿ, ಪುಟ್ಟಣ್ಣಯ್ಯ ಅವರನ್ನು ಸ್ಮರಿಸಬೇಕು ಎಂದರು.

ಶೀಘ್ರದಲ್ಲಿ ಭೂಮಿ ಒಡೆಯನೇ ನಿಜವಾದ ಶ್ರೀಮಂತನಾಗುವ ಕಾಲ ಬರುತ್ತದೆ. ಹಾಗಾಗಿ ರೈತರು ಜಮೀನು ಮಾರಾಟ ಮಾಡಬಾರದು. ಕಂಪ್ಯೂಟರ್ ಬದಲು ಕೃಷಿಗೆ ಆದ್ಯತೆ ಸಿಗಲಿದೆ ಎಂದು ಬೆಟ್ಟಹಳ್ಳಿಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗುವ ರೈತ ತಾನು ಬೆಳೆದ ಬೆಳೆಯನ್ನು ರಸ್ತೆಗೆ ಚೆಲ್ಲುವ ಸ್ಥಿತಿಗೆ ಬಂದಾಗ ಸರ್ಕಾರಗಳು ರೈತರ ಪರವಾಗಿ ನಿಲ್ಲುವ ಕೆಲಸ ಮಾಡಬೇಕು ಎಂದು ಆದಿಚುಂಚನಗಿರಿ ವಿಜಯನಗರ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ ಸಲಹೆ ಮಾಡಿದರು.

ಜಡೆದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ ವ್ಯಾಸ ಸಂಶೋಧಕ ಡಾ. ಮುನಿರಾಜಪ್ಪ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ರೈತರನ್ನು ಕುರಿತು ಮಾತನಾಡಿದರು.

ರೈತ ದಿನಾಚರಣೆಯಲ್ಲಿ ತಹಶೀಲ್ದಾರ್ ಶರತ್ ಕುಮಾರ್, ಪ್ರಗತಿಪರ ರೈತರದ ಚಿಕ್ಕಣ್ಣ, ಶಿವಲಿಂಗಯ್ಯ, ಅಂಜಿನಪ್ಪ, ಶಿವಲಿಂಗಯ್ಯ, ಕೆಂಪೇಗೌಡ, ರಾಮಣ್ಣ, ಶೇಖರ್, ನಂಜೇಗೌಡ, ನಾರಾಯಣಪ್ಪ, ಭೈರಪ್ಪ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಪುರಸಭೆ ಮಾಜಿ ಅಧ್ಯಕ್ಷ ಪುರುಷೋತ್ತಮ್, ಡಾ.ಚೇತನ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸುಭಾಷ್, ಗ್ರಾ.ಪಂ.ಮಾಜಿ ಸದಸ್ಯ ಧನಂಜಯ, ರೈತ ಸಂಘದ ಅಧ್ಯಕ್ಷ ಗೋವಿಂದರಾಜು, ಪ್ರಾಂಶುಪಾಲ ಉಮೇಶ್, ಯುವ ರೈತ ಸಂಘದ ಜಿಲ್ಲಾಧ್ಯಕ್ಷ. ರವಿಕುಮಾರ್, ಯುವ ತಾಲ್ಲೂಕು ಅಧ್ಯಕ್ಷ ಮುನಿರಾಜು, ಗೌರವಧ್ಯಕ್ಷ ಚನ್ನರಾಯಪ್ಪ, ಶಿವರುದ್ರಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.