ಎರಡೂ ಕಡೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ₹ 25 ಲಕ್ಷ ವೆಚ್ಚದಲ್ಲಿ ಸ್ಮಶಾನಕ್ಕೆ ಮೂಲಭೂತ ಸೌಕರ್ಯಗಳಾದ ಕಾಂಪೌಂಡ್, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಸಲು ಶಂಕುಸ್ಥಾಪನೆ ನೆರವೇರಿಸಲಾಯಿತು. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಗಾಣಕಲ್ ನಟರಾಜ್, ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಸೂಯ ರಮೇಶ್, ಸದಸ್ಯರಾದ ಹೊಂಬೆಗೌಡ, ಕೃಷ್ಣ, ಹೊಂಬಯ್ಯ, ರೈತ ಮುಖಂಡ ರಂಗಸ್ವಾಮಿ, ಕಾಕರಮನಹಳ್ಳಿ ಶಿವಲಿಂಗಯ್ಯ ಹಾಜರಿದ್ದರು.