ನಾನು ಕಾಲೇಜಿಗೆ ಬಂದು ಆರು ತಿಂಗಳಾಗಿದೆ. ಸ್ವಂತ ಕಟ್ಟಡ ಕಾಮಗಾರಿಗೆ ಸಂಬಂಧಪಟ್ಟ ಎಂಜಿನಿಯರ್‌ಗೆ ಸಂಪರ್ಕಿಸಿದ್ದೇನೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ.ರಾಜೇಶ್ ಪ್ರಾಂಶುಪಾಲ ಸರ್ಕಾರಿ ಐಟಿಐ ಕಾಲೇಜು ಹಾರೋಹಳ್ಳಿ
ಹಾರೋಹಳ್ಳಿ ಹೊಸ ತಾಲ್ಲೂಕು. ಆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಬಡಮಕ್ಕಳು ಓದುವ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು. ಸಂಬಂಧಪಟ್ಟವರು ಈನಿಟ್ಟಿನಲ್ಲಿ ಕಾರ್ಯತತ್ಪರವಾಗಲಿನಾಗರಾಜು ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ
ಪ್ರತಿತಿಂಗಳೂ ಬಾಡಿಗೆ ಕಟ್ಟಡಕ್ಕಾಗಿ ಅರ್ಧಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣ ವ್ಯಯಿಸಲಾಗುತ್ತಿದೆ. 15 ವರ್ಷ ಕಟ್ಟಿರುವ ಬಾಡಿಗೆ ಮೊತ್ತದಲ್ಲಿಯೇ ಸ್ವಂತ ಕಟ್ಟಡ ಕಟ್ಟಬಹುದಿತ್ತು. ಈಗಲಾದರೂ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಿ.ಕೃಷ್ಣಮೂರ್ತಿ ಸ್ಥಳೀಯ ನಿವಾಸಿ
ಕಾಲೇಜಿಗೆ ಬೇಕು ಸುಸಜ್ಜಿತ ಸ್ವಂತ ಕಟ್ಟಡ ಐದು ವರ್ಷಗಳ ಹಿಂದೆ ಇದೇ ಕಾಲೇಜಿನ ಬಾಡಿಗೆ ಕಟ್ಟಡದಲ್ಲಿಯೇ ಓದಿ ನನ್ನ ವ್ಯಾಸಂಗ ಪೂರ್ಣಗೊಳಿಸಿದೆ. ಬಹು ಹಿಂದಿನಿಂದಲೂ ಕಾಲೇಜಿನಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಕುಡಿಯುವ ನೀರು ಮತ್ತು ಶೌಚಾಲಯದ ಸೌಲಭ್ಯ ಕೊರತೆಯಿದೆ.ಕನಿಷ್ಠ ಈಗಿನ ವಿದ್ಯಾರ್ಥಿಗಳಿಗಾದರೂ ಸ್ವಂತ ಕಟ್ಟಡದ ಭಾಗ್ಯ ಹಾಗೂ ಮೂಲಸೌಕರ್ಯ ದೊರೆತು ಅನುಕೂಲವಾಗಲಿ.–ಸಿದ್ದರಾಜು ಹಳೆಯ ವಿದ್ಯಾರ್ಥಿ
ಶೀಘ್ರ ಸೌಕರ್ಯ ದೊರೆಯಲಿ ನಾನೂ ಈ ಕಾಲೇಜಿನ ಹಳೆಯ ವಿದ್ಯಾರ್ಥಿ. ಮೂಲಸೌಕರ್ಯಗಳ ಕೊರತೆಯಲ್ಲೇ ವಿದ್ಯಾಭ್ಯಾಸ ಮುಗಿಯಿತು. ನಾನು ಓದುವಾಗ ತರಬೇತಿಗಾಗಿ ಕೆಲವು ಕಲಿಕಾ ಉಪಕರಣಗಳೇ ಇರಲಿಲ್ಲ. ಜೊತೆಗೆ ಉಪನ್ಯಾಸಕರ ಕೊರತೆಯೂ ಇತ್ತು. ನಮ್ಮ ಬ್ಯಾಚಿನ ಅವಧಿಯಲ್ಲೇ ಹೊಸ ಕಟ್ಟಡಕ್ಕೆ ಅನುಮೋದನೆ ದೊರೆತಿತ್ತು. ಆದರೆ ಕಾಮಗಾರಿ ಆರಂಭವಾಗಲಿಲ್ಲ. ಈಗಲಾದರೂ ಸಂಬಂಧಿಸಿದವರು ಸ್ವಂತ ಕಟ್ಟಡ ನಿರ್ಮಾಣಕ್ಕೆ ಮನಸು ಮಾಡಲಿ.–ರಾಜೇಶ್ ಹಳೆಯ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.