ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಆಪ್ತರ ಮನೆ ಮೇಲೆ ಐ.ಟಿ ದಾಳಿ

Published 17 ಏಪ್ರಿಲ್ 2024, 7:38 IST
Last Updated 17 ಏಪ್ರಿಲ್ 2024, 7:38 IST
ಅಕ್ಷರ ಗಾತ್ರ

ಕನಕಪುರ: ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಲು ಕಾಂಗ್ರೆಸ್‌ ಪಕ್ಷವು ಹಣ ಸಂಗ್ರಹಣೆ ಮಾಡಿದೆ ಎಂಬ ಮಾಹಿತಿ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳ ತಂಡವು, ಉಪ ಮುಖ್ಯಮಂತ್ರಿ ಆಪ್ತ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಡಿ. ವಿಜಯದೇವು ಅವರ ತಪ್ಪಲು ರೆಸಾರ್ಟ್‌ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದೆ.

ಎರಡು ಕಾರುಗಳಲ್ಲಿ ಬಂದ ಐ.ಟಿ ಅಧಿಕಾರಿಗಳ ತಂಡವು ವಿಜಯದೇವು ಅವರ ಕನಕಪುರ ನಗರದಲ್ಲಿರುವ ಮನೆ ಹಾಗೂ ತಾಲ್ಲೂಕಿನ ಮರಳೆಬೇಕುಪ್ಪೆ ಗ್ರಾಮದಲ್ಲಿರುವ ‘ತಪ್ಪಲು’ ರೆಸಾರ್ಟ್‌ ಮೇಲೆ ದಾಳಿ ನಡೆಸಿ ತಡರಾತ್ರಿವರೆಗೂ ಪರಿಶೀಲನೆ ನಡೆಸಿತು.

ಡಿ.ಕೆ.ಶಿವಕುಮಾರ್‌ ಆಪ್ತರಾದ ಬಮೂಲ್‌ ಅಧ್ಯಕ್ಷ ರಾಜಕುಮಾರ್‌, ಡಿಕೆಎಸ್‌ ಟ್ರಸ್ಟ್‌ ‌ಅಧ್ಯಕ್ಷ ಚಿಕ್ಕೊಂಡಳ್ಳಿ ವಿಶ್ವನಾಥ್‌ ಹಾಗೂ ಕೊಳಗೊಂಡನಹಳ್ಳಿ ಶೆಟ್ಟರ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಹಣ ದೊರೆತಿದೆ ಎಂದು ಸಾರ್ವಜನಿಕವಾಗಿ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT